alex Certify SHOCKING NEWS: ಬಾಡಿಗೆ ಕಾರು ನೀಡುವುದಾಗಿ ಹೇಳಿ ವಂಚನೆ; 100ಕ್ಕೂ ಹೆಚ್ಚು ಕಾರು ಮಾರಿದ್ದ ನಾಲ್ವರು ಆರೋಪಿಗಳು ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಬಾಡಿಗೆ ಕಾರು ನೀಡುವುದಾಗಿ ಹೇಳಿ ವಂಚನೆ; 100ಕ್ಕೂ ಹೆಚ್ಚು ಕಾರು ಮಾರಿದ್ದ ನಾಲ್ವರು ಆರೋಪಿಗಳು ಅಂದರ್

ಬೆಂಗಳೂರು: ಟ್ರಾವಲ್ ಹೆಸರಲ್ಲಿ ಬಾಡಿಗೆ ಕಾರು ನೀಡುವುದಾಗಿ ಹೇಳಿ ವಂಚಿಸಿ ನೂರಾರು ಕಾರುಗಳನ್ನು ಮಾರಾಟ ಮಾಡುತ್ತಿದ್ದ ಆರ್.ಎಸ್. ಟ್ರಾವೆಲ್ ಏಜನ್ಸಿ ಮಾಲೀಕ ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಟ್ರಾವೆಲ್ ಏಜೆನ್ಸಿ ಮಾಲೀಕ ಶಿವರಾಜ್, ಕೃಷ್ಣೇಗೌಡ, ಶ್ರೀಕಾಂತ್, ಅಸ್ಗರ್ ಬಂಧಿತ ಆರೋಪಿಗಳು. ಆರ್.ಎಸ್. ಟ್ರಾವೆಲ್ಸ್ ಹೆಸರಲ್ಲಿ ಕಚೇರಿ ತೆಗೆದು ಕಾರುಗಳನ್ನು ಬಾಡಿಗೆಗೆ ನೀಡುವುದಾಗಿ ಹೇಳಿ ಟ್ರಾವೆಲ್ಸ್ ನಲ್ಲಿ ಅಟ್ಯಾಚ್ ಮಾಡಿಸಿಕೊಂಡು ನಂಬಿಸುತ್ತಿದ್ದರು. ಹೀಗೆ ಪಡೆದ ಕಾರುಗಳನ್ನು ಮಾರಾಟ ಮಾಡಿ ಪರಾರಿಯಾಗಿದ್ದರು.

ಸುಮಾರು ನೂರಕ್ಕು ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದ ಆರೋಪಿಗಳ ವಿರುದ್ಧ ಹಲವು ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ 98 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...