ಲಖನೌ: ಕಾಮಪಿಪಾಸುವೊಬ್ಬ ಹಸುಗೂಸಿನ ಮೇಲೆ ಅಟ್ಟಹಾಸ ಮೆರೆದಿರುವ ಹೇಯ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಕಂದಮ್ಮನ ಮೇಲೆ ಮನೆ ಕೆಲಸದ ಹುಡುಗನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಸಾದತ್ ಗಂಜ್ ನಲ್ಲಿ ನಡೆದಿದೆ.
18 ವರ್ಷದ ಸನ್ನಿ ಕುಮಾರ್ ಎಂಬ ಮನೆ ಕೆಲಸದ ಹುಡುಗ ತೊಟ್ಟಿಲಲ್ಲಿ ಮಲಗಿದ್ದ ಹತ್ತು ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಮಗುವಿನ ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೂಮಿನಲ್ಲಿ ಮಲಗಿದ್ದ ಮಗು ಅಳುವುದನ್ನು ಕೇಳಿ ಓಡಿಬಂದಿದ್ದಾರೆ. ರೂಮಿಗೆ ಬಂದು ನೋಡುವಷ್ಟರಲ್ಲಿ ಮಗು ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿತ್ತು. ಕೆಲಸದ ಹುಡುಗ ಅರೆಬರೆ ಅಸ್ತವ್ಯಸ್ಥ ಬಟ್ಟೆಯಲ್ಲಿ ನಿಂತಿದ್ದ. ಪ್ರಶ್ನಿಸುವಷ್ಟರಲ್ಲಿ ರೂಮಿನಿಂದ ಹೊರಗೋಡಿ ಪರಾರಿಯಾಗಿದ್ದ.
ಮುಗ್ದ ಮನಸ್ಸಿನ ಈ ಪುಟ್ಟ ಮಕ್ಕಳ ವಿಡಿಯೋದಲ್ಲಿದೆ ʼಮಾನವೀಯತೆʼ ಪಾಠ
ಮಗುವಿನ ಸ್ಥಿತಿಕಂಡು ತಾಯಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಪಿಡಿಯಾಟ್ರಿಕ್ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಹುಡುಗನನ್ನು ಪೊಲೀಸರು ಬಂಧಿಸಿದ್ದು, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.