alex Certify SHOCKING NEWS: ಹೊಟ್ಟೆಯಲ್ಲೇ ಮೃತಪಟ್ಟ ಮಗು; ವೈದ್ಯರ ನಿರ್ಲಕ್ಷಕ್ಕೆ ಇದೀಗ ತಾಯಿಯೂ ಸಾವು; ಕುಟುಂಬಸ್ಥರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಹೊಟ್ಟೆಯಲ್ಲೇ ಮೃತಪಟ್ಟ ಮಗು; ವೈದ್ಯರ ನಿರ್ಲಕ್ಷಕ್ಕೆ ಇದೀಗ ತಾಯಿಯೂ ಸಾವು; ಕುಟುಂಬಸ್ಥರ ಆಕ್ರೋಶ

ಮಂಗಳೂರು: ತಾಯಿಯ ಗರ್ಭದಲ್ಲೇ ಮಗು ಸಾವನ್ನಪ್ಪಿದ್ದರೂ ಮಗು ತೆಗೆಯಲು ವಿಳಂಬ ಮಾಡಿದ್ದ ವೈದ್ಯರ ಬೇಜವಾಬ್ದಾರಿ ತನಕ್ಕೆ ಇದೀಗ ತಾಯಿಯ ಜೀವವೂ ಹೋಗಿರುವ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ.

25 ವರ್ಷದ ಗರ್ಭಿಣಿ ಸವಿತಾ ನಿನ್ನೆ ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಹೊಟ್ಟೆಯಲ್ಲಿಯೆ ಮಗು ಸಾವನ್ನಪ್ಪಿರುವುದು ಗೊತ್ತಾದರೂ ವೈದ್ಯರು ಮಗುವನ್ನು ಹೊರತೆಗೆಯದೇ ನಿರ್ಲಕ್ಷ ಮಾಡಿದ್ದರು.

ಬಳಿಕ ಸಂಜೆಯ ನಂತರ ಮಗುವನ್ನು ಹೊರತೆಗಿದ್ದರು. ಆದರೀಗ ತಾಯಿ ಸವಿತಾ ಕೂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ವೈದ್ಯರ ನಿರ್ಲಕ್ಷದಿಂದಲೇ ತಾಯಿ ಹಾಗೂ ಮಗು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಹಿಳೆಯ ಪತಿ ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯರ ನಿರ್ಲಕ್ಷದ ವಿರುದ್ಧ ಇದೀಗ ಮಹಿಳೆಯ ಪತಿ ಗಣೇಶ್ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...