alex Certify SHOCKING NEWS: ಸಂಪೂರ್ಣ ಲಸಿಕೆ ಸ್ವೀಕರಿಸಿದರೂ ಐಐಟಿಯಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋಂಕು ಧೃಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಸಂಪೂರ್ಣ ಲಸಿಕೆ ಸ್ವೀಕರಿಸಿದರೂ ಐಐಟಿಯಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋಂಕು ಧೃಡ

ಕಳೆದ ಕೆಲವು ದಿನಗಳಿಂದ ಕೋವಿಡ್​ ಸೋಂಕಿಗೆ ಒಳಗಾಗಿರುವ ಹೈದರಾಬಾದ್​​ನ ಐಐಟಿಯ ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಒಂದು ವಾರದಲ್ಲಿ ಹೈದರಾಬಾದ್​ನಲ್ಲಿ 112 ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಈ ಎಲ್ಲ ವಿದ್ಯಾರ್ಥಿಗಳು 2 ಡೋಸ್​ ಕೊರೊನಾ ಲಸಿಕೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೈದರಾಬಾದ್​ನ ಅಧಿಕಾರಿಗಳು ತಿಳಿಸಿದ್ದಾರೆ. ಐಐಟಿ ಹೈದರಾಬಾದ್​ ಕ್ಯಾಂಪಸ್​ನಲ್ಲಿರುವ ಎಲ್ಲಾ ಕೋವಿಡ್​ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ. ಇವರೆಲ್ಲ ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ. ಕೆಲವರಂತೂ ಲಕ್ಷಣರಹಿತ ಸೋಂಕನ್ನು ಹೊಂದಿದ್ದಾರೆ ಎನ್ನಲಾಗಿದೆ.

ನಮ್ಮಲ್ಲಿ ಪ್ರಸ್ತುತ 112 ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಪ್ರತಿಯೊಬ್ಬರನ್ನು ಐಸೋಲೇಷನ್​ನಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ. ಇವರೆಲ್ಲರೂ ಬಹುತೇಕರು ಸೌಮ್ಯ ಹಾಗೂ ಕೆಲವರು ಲಕ್ಷಣರಹಿತ ಸೋಂಕನ್ನು ಹೊಂದಿದ್ದಾರೆ. ಇವರೆಲ್ಲ ನಾಲ್ಕೈದು ದಿನಗಳಲ್ಲಿ ಸೋಂಕಿನಿಂದ ಗುಣಮುಖರಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಐಐಟಿ ಆಡಳಿತ ಮಂಡಳಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...