alex Certify SHOCKING NEWS: ಮಾಸ್ಕ್ ಇಲ್ಲದೇ ಓಡಾಡಿದ ವೈದ್ಯೆ; ಪ್ರಶ್ನಿಸಿದ್ದಕ್ಕೆ ನಾನು ಡಾಕ್ಟರ್ ನನಗೆ ರೂಲ್ಸ್ ಹೇಳ್ತಿರಾ ಎಂದು ರಸ್ತೆಯಲ್ಲೇ ಡಿಸಿಪಿ ಜತೆ ಜಗಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಮಾಸ್ಕ್ ಇಲ್ಲದೇ ಓಡಾಡಿದ ವೈದ್ಯೆ; ಪ್ರಶ್ನಿಸಿದ್ದಕ್ಕೆ ನಾನು ಡಾಕ್ಟರ್ ನನಗೆ ರೂಲ್ಸ್ ಹೇಳ್ತಿರಾ ಎಂದು ರಸ್ತೆಯಲ್ಲೇ ಡಿಸಿಪಿ ಜತೆ ಜಗಳ

ಬೆಳಗಾವಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಮಾಸ್ಕ್ ದೈಹಿಕ ಅಂತರ ಪಾಲನೆ ಬಗ್ಗೆ ನಿರ್ಲಕ್ಷ ಮಾತ್ರ ಕಡಿಮೆಯಾಗಿಲ್ಲ. ಜನಸಾಮಾನ್ಯರು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ಓಡಾಡುವುದು ಸಾಮಾನ್ಯ, ಆದರೆ ಜನರಿಗೆ ಬುದ್ಧಿ ಹೇಳಬೇಕಾದ ವೈದ್ಯರೇ ಮಾಸ್ಕ್ ಮರೆತು ಸುತ್ತಾಡಿದರೆ ಎನು ಹೇಳಬೇಕು ?

ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದ್ದು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಆದರೂ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇತ್ತ ಕುಂದಾನಗರಿ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ವೈದ್ಯೆಯೊಬ್ಬರು ಮಾಸ್ಕ್ ಹಾಕದೇ ಓಡಾಡಿದ್ದಲ್ಲದೇ, ಪ್ರಶ್ನೆ ಮಾಡಿದ್ದಕ್ಕೆ ಡಿಸಿಪಿ ಜತೆ ಕಿರಿಕ್ ಮಾಡಿದ್ದಾರೆ.

ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಡಿಸಿಪಿ ರವೀಂದ್ರ, ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ಕರ್ಫ್ಯೂ ಪರಿಶೀಲನೆ ನಡೆಯುತ್ತಿದ್ದು, ಈ ವೇಳೆ ಮಾಸ್ಕ್ ಹಾಕದೇ ಕಾರಿನಲ್ಲಿ ಬಂದ ವೈದ್ಯೆಯೊಬ್ಬರನ್ನು ತಡೆದ ಪೊಲೀಸರು, ಮಾಸ್ಕ್ ಹಾಕಿಕೊಳ್ಳುವಂತೆ ವೈದ್ಯೆ ಹಾಗೂ ಆಕೆಯ ಕಾರು ಚಾಲಕನಿಗೆ ಸೂಚಿಸಿದ್ದಾರೆ. ಇದಕ್ಕೆ ಕಾರಿನಿಂದ ಇಳಿದ ವೈದ್ಯೆ, ರಸ್ತೆಯಲ್ಲಿ ಓಡಾಡುವವರು ಮಾಸ್ಕ್ ಹಾಕಿಲ್ಲ, ನಿಮ್ಮ ಪೊಲೀಸ್ ಸಿಬ್ಬಂದಿಗಳು ಮಾಸ್ಕ್ ಹಾಕಿಲ್ಲ. ನಾನು ಡಾಕ್ಟರ್, ನನಗೆ ರೂಲ್ಸ್ ಹೇಳ್ತೀರಾ? ಎಂದು ಮೊಂಡುವಾದ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...