ಬೆಂಗಳೂರು: ಮಲಗಿದ್ದ ಪತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತ್ನಿಯೇ ಪತಿಯನ್ನು ಕೊಲೆಗೈದ ಘೋರ ಘಟನೆ ಬೆಂಗಳೂರಿನ ಜಕ್ಕಸಂಧ್ರದಲ್ಲಿ ನಡೆದಿದೆ.
ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ತಾಲೂಕಿನ ಹನುಮಯ್ಯ (29) ಮೃತ ವ್ಯಕ್ತಿ. ಪತ್ನಿ ಭಾಗ್ಯಮ್ಮ ತನ್ನ ಪ್ರಿಯಕರ ಹಾಗೂ ಸಹೋದರನ ಜತೆ ಸೇರಿ ಪತಿಯನ್ನೆ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ದುಷ್ಕರ್ಮಿಗಳು ತನ್ನ ಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಬಿಂಬಿಸಲು ನಾಟಕವಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….!
ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲಿಸರು ಆರೋಪಿ ಭಾಗ್ಯಮ್ಮ, ಆಕೆಯ ಪ್ರಿಯಕರ ನಾಗೇಶ್ ಹಾಗೂ ಸಹೋದರ ನಾರಾಯಣಸ್ವಾಮಿಯನ್ನು ಬಂಧಿಸಿದ್ದಾರೆ.