ಬೆಂಗಳೂರು: ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಡವಟ್ಟು ಸಂಭವಿಸಿದ್ದು, ಯಂತ್ರದ ಬೆಲ್ಟ್ ಗೆ ವೇಲ್ ಸಿಲುಕಿ ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ Z.S ಫ್ಯಾಕ್ಟಿರಿಯಲ್ಲಿ ಸಂಭವಿಸಿದೆ.
ಶಾಜಿಯಾ ಮೃತ ಯುವತಿ. ಶಾಜಿಯಾ ಫ್ಯಾಕ್ಟರಿ ಕೆಲಸ ಮುಗಿಸಿ ಯಂತ್ರದ ಸ್ವಿಚ್ ಆಫ್ ಮಾಡಲು ಹೋಗಿದ್ದಾರೆ. ಈ ವೇಳೆ ಯಂತ್ರದ ಬೆಲ್ಟ್ ಗೆ ಆಕೆಯ ವೇಲ್ ಸಿಲುಕಿದ್ದು, ಬಿಡಿಸಿಕೊಳ್ಳಲು ವೇಲ್ ಎಳೆಯುತ್ತಿದ್ದಂತೆ ಯಂತ್ರವೇ ಯುವತಿಯ ಮೇಲೆ ಬಿದ್ದಿದೆ.
ಬೆಳಗಿನಜಾವ 3 ಗಂಟೆಗೆ ಪಬ್ ಮೇಲೆ ದಾಳಿ, ಸಿಕ್ಕಿಬಿದ್ದ ಸೆಲೆಬ್ರಿಟಿಗಳ್ಯಾರು ಗೊತ್ತಾ…?
ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ. ಫ್ಯಾಕ್ಟರಿ ಮಾಲೀಕರ ನಿರ್ಲಕ್ಷವೇ ಯುವತಿ ಸಾವಿಗೆ ಕಾರಣ ಎಂದು ಕುಟುಂಬದವರು ಹಾಗೂ ಕೆಲಸಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಯಾಕ್ಟರಿ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.