alex Certify ಬೆಳಗಿನಜಾವ 3 ಗಂಟೆಗೆ ಪಬ್ ಮೇಲೆ ದಾಳಿ, ಸಿಕ್ಕಿಬಿದ್ದ ಸೆಲೆಬ್ರಿಟಿಗಳ್ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗಿನಜಾವ 3 ಗಂಟೆಗೆ ಪಬ್ ಮೇಲೆ ದಾಳಿ, ಸಿಕ್ಕಿಬಿದ್ದ ಸೆಲೆಬ್ರಿಟಿಗಳ್ಯಾರು ಗೊತ್ತಾ…?

ಹೈದರಾಬಾದ್: ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ‘ಬಿಗ್ ಬಾಸ್’ ವಿಜೇತ, ಟಾಲಿವುಡ್ ಗಾಯಕ ರಾಹುಲ್ ಸಿಪ್ಲಿಗುಂಜ್ ಹಾಗೂ ಹಲವು ಪ್ರಮುಖರ ಮಕ್ಕಳು ಸೇರಿದಂತೆ 150 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಬಾಲಿವುಡ್ ಸೆಲೆಬ್ರಿಟಿಗಳು ಹೆಚ್ಚಾಗಿ ಭಾಗವಹಿಸುವ ಹೈದರಾಬಾದ್ ಬಂಜಾರ ಹಿಲ್ಸ್ ಪ್ರದೇಶದ ಫುಡ್ಡಿಂಗ್ ಅಂಡ್ ಮಿಂಕ್ ಪಬ್ ಮೇಲೆ ದಾಳಿ ನಡೆಸಲಾಗಿದೆ. ನಿಗದಿತ ಸಮಯ ಮುಗಿದ ನಂತರವೂ ಪಬ್ ನಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದ್ದು ಕೋಕೇನ್, ಗಾಂಜಾ ಕೂಡ ದಾಳಿಯವೇಳೆ ಪತ್ತೆಯಾಗಿದೆ.

ಬೆಳಗಿನ ಜಾವ 3 ಗಂಟೆಗೆ ದಾಳಿ ನಡೆಸಿದ್ದು, 33 ಯುವತಿಯರು ಸೇರಿದಂತೆ 150 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮತ್ತಿನಲ್ಲಿದ್ದ ಯುವಕರು ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.

ಬಂಜಾರಾ ಹಿಲ್ಸ್‌ನ ಉನ್ನತ ಪ್ರದೇಶವಾದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ ನಲ್ಲಿರುವ ಪುಡ್ಡಿಂಗ್ ಮತ್ತು ಮಿಂಕ್ ಪಬ್‌ ನಲ್ಲಿ ಹಠಾತ್ ದಾಳಿ ನಡೆಸಿ 6 ಗ್ರಾಂ ಗೂ ಹೆಚ್ಚು ಕೊಕೇನ್ ವಶಪಡಿಸಿಕೊಂಡಿದ್ದಾರೆ. ಹಲವಾರು ಹೈ ಪ್ರೊಫೈಲ್ ಸೆಲೆಬ್ರಿಟಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಾಜಿ ಸಂಸದ ಅಂಜನ್ ಕುಮಾರ್ ಯಾದವ್ ಪುತ್ರ ಅರವಿಂದ್, ತೆಲುಗಿನ ಖ್ಯಾತ ನಾಯಕನ ಪುತ್ರಿ, ಹಿರಿಯ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪುತ್ರಿ ತೇಜಸ್ವಿನಿ ಚೌಧರಿ, ಮಾಜಿ ಶಾಸಕ ನಂದೀಶ್ವರ್ ಗೌಡ್ ಪುತ್ರಿ, ಮಾಜಿ ಡಿಜಿಪಿ ಪುತ್ರಿ ನಿಹಾರಿಕಾ ಕೊನಿಡೇಲಾ ಮತ್ತಿತರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ. ಅವರಿಗೂ ಪೊಲೀಸರು ನೋಟಿಸ್ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...