alex Certify SHOCKING NEWS: ಫೇಸ್ ಬುಕ್ ನಲ್ಲಿ ಆಂಟಿ ಮೇಲೆ ಯುವಕನ ಲವ್; ಮದುವೆಗೆ ನಿರಾಕರಿಸಿದ್ದಕ್ಕೆ ಆಸಿಡ್ ದಾಳಿ ನಡೆಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಫೇಸ್ ಬುಕ್ ನಲ್ಲಿ ಆಂಟಿ ಮೇಲೆ ಯುವಕನ ಲವ್; ಮದುವೆಗೆ ನಿರಾಕರಿಸಿದ್ದಕ್ಕೆ ಆಸಿಡ್ ದಾಳಿ ನಡೆಸಿದ ಮಹಿಳೆ

ತಿರುವನಂತಪುರಂ: ಮಹಿಳೆಯೊಂದಿಗಿನ ಯುವಕನ ಪ್ರೀತಿ ಆಸಿಡ್ ದಾಳಿಯಲ್ಲಿ ಅಂತ್ಯವಾಗಿದ್ದು, ದೃಷ್ಟಿಯನ್ನೇ ಕಳೆದುಕೊಂಡು ಬದುಕನ್ನೇ ಕತ್ತಲು ಮಾಡಿಕೊಂಡ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿದೆ.

ಫೇಸ್ ಬುಕ್ ಮೂಲಕ 35 ವರ್ಷದ ಮಹಿಳೆ ಷಿಬಾ ಎಂಬಾಕೆಯನ್ನು ಪರಿಚಯ ಮಾಡಿಕೊಂಡ 28 ವರ್ಷದ ಅರುಣ್ ಕುಮಾರ್ ಎಂಬ ಯುವಕ ಆಕೆಯ ಪ್ರೀತಿಯಲ್ಲಿ ಸಿಲುಕಿದ್ದಾನೆ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿ ಬಳಿಕ ಮದುವೆಯಾಗುವ ನಿರ್ಧಾರಕ್ಕೂ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಯುವಕನಿಗೆ ತನ್ನ ಪ್ರೀತಿಯ ಹುಡುಗಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬ ವಿಷಯ ಗೊತ್ತಾಗಿದೆ.

ಸಹೋದ್ಯೋಗಿಗಳ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ವೈದ್ಯರು ಅರೆಸ್ಟ್

ವಿಷಯ ತಿಳಿಯುತ್ತಿದ್ದಂತೆ ಮಹಿಳೆಯಿಂದ ದೂರವಾಗಲು ಯುವಕ ನಿರ್ಧರಿಸಿದ್ದಾನೆ. ಅಲ್ಲದೇ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ತಿರುವಂತಪುರಂ ಬಳಿ ಯುವಕನ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಸಿಡ್ ದಾಳಿಗೊಳಗಾದ ಯುವಕ ಅರುಣ್ ಕುಮಾರ್ ಮುಖ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಯುವಕ ತನ್ನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಆಸಿಡ್ ದಾಳಿ ವೇಳೆ ಮಹಿಳೆಗೂ ಗಾಯಗಳಾಗಿವೆ.

ಯುವಕನ ದೂರಿನ ಮೇರೆಗೆ ಇದೀಗ 35 ವರ್ಷದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...