ಬೆಂಗಳೂರು: ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಟೊಮೆಟೊ ಬೆಲೆ ಶತಕ ಬಾರಿಸಿ ಮುನ್ನುಗ್ಗಿದೆ. ಆದರೂ ಟೊಮೆಟೋಗೆ ಭಾರಿ ಡಿಮ್ಯಾಂಡ್ ಹಿನ್ನೆಲೆಯಲ್ಲಿ ಕೆಲ ಬೆಳೆಗಾರರು ಟೊಮೆಟೋ ತೋಟಕ್ಕೆ ಕಾವಲುಗಾರರನ್ನು ನೇಮಕ ಮಾಡುತ್ತಿದ್ದಾರೆ. ಇಷ್ಟಾಗ್ಯೂ ಕಳ್ಳರು ಟೊಮೆಟೋ ವಾಹನ ಸಮೇತ ಪರಾರಿಯಾಗಿರುವ ಘಟನೆ ಬೆಂಗಳೂರಿನ ಯಲಹಂಕಬಳಿಯ ಚಿಕ್ಕಜಾಲ ಗ್ರಾಮದ ಬಳಿ ನಡೆದಿದೆ.
ಹಿರಿಯೂರಿನಿಂದ ಕೋಲಾರಕ್ಕೆ ರೈತ ಟೊಮೆಟೋ ಸಾಗಿಸುತ್ತಿದ್ದರು. ಇದನ್ನು ಕಂಡ ಮೂವರು ಖದೀಮರು ಟೊಮೆಟೊ ತುಂಬಿದ್ದ ಬೊಲೆರೋ ವಾಹನ ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಳಿಕ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಅಡ್ಡಗಟ್ಟಿ ತಮ್ಮ ವಾಹನಕ್ಕೆ ಟಚ್ ಮಾಡಿದ್ದೀರಿ ಎಂದು ಗಲಾಟೆ ಮಾಡಿ ರೈತ ಹಾಗೂ ಚಾಲಕನಿಗೆ ಹಲ್ಲೆ ಮಾಡಿ, ಹಣ ಟ್ರಾನ್ಸ್ ಫರ್ ಮಾಡುವಂತೆ ಹೇಳಿ ಹಣವನ್ನೂ ದೋಚಿ, ಡ್ರೈವರ್ ಸಮೇತ ಬುಲೆರೋ ವಾಹನವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ರೈತ ಆರ್.ಎಂ.ಸಿ.ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.