alex Certify Shocking News: ಕೇಕ್ ಎಂದು ಇಲಿ ಪಾಷಾಣ ಸೇವಿಸಿದ್ದ ಬಾಲಕಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಕೇಕ್ ಎಂದು ಇಲಿ ಪಾಷಾಣ ಸೇವಿಸಿದ್ದ ಬಾಲಕಿ ಸಾವು

ಇಲಿಗಳನ್ನು ಕೊಲ್ಲಲು ಮನೆಯ ಕಿಟಕಿಯಲ್ಲಿ ಇಟ್ಟಿದ್ದ ಪಾಷಾಣವನ್ನು ಕೇಕ್ ಎಂದು ಭಾವಿಸಿ ಅದನ್ನು ಸೇವಿಸಿದ್ದ 14 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕರೈಕಲ್ ನಲ್ಲಿ ನಡೆದಿದೆ.

ಸಲೋತಾ ಎಂಬ ಬಾಲಕಿ ಮೃತಪಟ್ಟವಳಾಗಿದ್ದು, ಈಕೆ ಇಲಿ ಪಾಷಾಣ ಸೇವಿಸಿದ ಬಳಿಕ ವಾಂತಿ ಮಾಡಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ತಾಯಿ ಸ್ಟೆಲ್ಲಾ ಮೇರಿ ವಿಚಾರಿಸಿದಾಗ ಕಿಟಕಿಯಲ್ಲಿಟ್ಟಿದ್ದ ಕೇಕ್ ತಿಂದಿರುವುದಾಗಿ ಹೇಳಿದ್ದಾಳೆ.

ಇದರಿಂದ ಗಾಬರಿಗೊಂಡ ತಾಯಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದಾಗ ಕರೈಕಲ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...