alex Certify SHOCKING NEWS: ಒಂದೇ ಸೀರೆಯ ಎರಡು ತುದಿಗೆ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಒಂದೇ ಸೀರೆಯ ಎರಡು ತುದಿಗೆ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು

ರಾಯಚೂರು: ಪ್ರೇಮಿಗಳಿಬ್ಬರೂ ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಹೆಚ್ 3 ಕ್ಯಾಂಪ್ ಬಳಿ ನಡೆದಿದೆ.

ಲವ ಹಾಗೂ ಕರೀನಾ ಮೃತ ಪ್ರೇಮಿಗಳು. ಲವ ಹಾಗೂ ಕರೀನಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯವರ ವಿರೋಧವಿತ್ತು. ಎರಡು ತಿಂಗಳ ಹಿಂದೆ ಲವ ಮನೆಯವರ ಒತ್ತಾಯಕ್ಕೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿದ್ದ. ಲವ ವಿವಾಹವಾದ ವಿಚಾರ ಕೇಳಿ ಕರೀನಾ ಆಘಾತಕ್ಕೊಳಗಾಗಿದ್ದಳು. ಇತ್ತ ಲವ ಮದುವೆಯಾದರೂ ಕರೀನಾಳನ್ನು ಬಿಟ್ಟಿರಲಾಗದ ಸ್ಥಿತಿಯಲ್ಲಿದ್ದ ಎನ್ನಲಾಗಿದೆ.

ಇದೀಗ ಲವ ಹಾಗೂ ಕರೀನಾ ಇಬ್ಬರೂ ಜಮೀನಿನಲ್ಲಿ ಮರಕ್ಕೆ ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...