ರಾಯಚೂರು: ಪ್ರೇಮಿಗಳಿಬ್ಬರೂ ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಹೆಚ್ 3 ಕ್ಯಾಂಪ್ ಬಳಿ ನಡೆದಿದೆ.
ಲವ ಹಾಗೂ ಕರೀನಾ ಮೃತ ಪ್ರೇಮಿಗಳು. ಲವ ಹಾಗೂ ಕರೀನಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯವರ ವಿರೋಧವಿತ್ತು. ಎರಡು ತಿಂಗಳ ಹಿಂದೆ ಲವ ಮನೆಯವರ ಒತ್ತಾಯಕ್ಕೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿದ್ದ. ಲವ ವಿವಾಹವಾದ ವಿಚಾರ ಕೇಳಿ ಕರೀನಾ ಆಘಾತಕ್ಕೊಳಗಾಗಿದ್ದಳು. ಇತ್ತ ಲವ ಮದುವೆಯಾದರೂ ಕರೀನಾಳನ್ನು ಬಿಟ್ಟಿರಲಾಗದ ಸ್ಥಿತಿಯಲ್ಲಿದ್ದ ಎನ್ನಲಾಗಿದೆ.
ಇದೀಗ ಲವ ಹಾಗೂ ಕರೀನಾ ಇಬ್ಬರೂ ಜಮೀನಿನಲ್ಲಿ ಮರಕ್ಕೆ ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.