alex Certify SHOCKING NEWS: ಅಮೆರಿಕದಲ್ಲಿ ಭಾರತೀಯರಿಗೆ ಜನಾಂಗೀಯ ನಿಂದನೆ; ‘ಐ ಹೇಟ್ ಯು ಇಂಡಿಯನ್ಸ್’ ಎಂದ ಅಮೆರಿಕನ್ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಅಮೆರಿಕದಲ್ಲಿ ಭಾರತೀಯರಿಗೆ ಜನಾಂಗೀಯ ನಿಂದನೆ; ‘ಐ ಹೇಟ್ ಯು ಇಂಡಿಯನ್ಸ್’ ಎಂದ ಅಮೆರಿಕನ್ ಮಹಿಳೆ

ಅಮೆರಿಕದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು ಮೆಕ್ಸಿಕನ್ – ಅಮೆರಿಕನ್ ಮಹಿಳೆಯೊಬ್ಬಳು ಭಾರತೀಯ ಮೂಲದ ನಾಲ್ವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿರುವುದಲ್ಲದೆ, ಅಶ್ಲೀಲವಾಗಿ ಕಿರುಚಾಡಿದ್ದಾಳೆ. ಜೊತೆಗೆ ‘ಐ ಹೇಟ್ ಯು ಇಂಡಿಯನ್ಸ್’ ಎಂದು ಅರಚಾಡಿದ್ದಾಳೆ.

ಬುಧವಾರ ರಾತ್ರಿ ಟೆಕ್ಸಾಸ್ ನ ಡಲ್ಲಾಸ್ ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತೆಯನ್ನು ಮೆಕ್ಸಿಕನ್ ಮೂಲದ ಅಮೆರಿಕನ್ ಎಸ್ಮಾರೋಲ್ಡೋ ಎಂದು ಗುರುತಿಸಲಾಗಿದೆ.

ಪಾರ್ಕಿಂಗ್ ಲಾಟ್ ಬಳಿ ಭಾರತೀಯ ಮೂಲದ ನಾಲ್ವರು ಮಹಿಳೆಯರು ನಿಂತಿದ್ದ ವೇಳೆ ಅವರ ಬಳಿ ಬಂದ ಈಕೆ ಏಕಾಏಕಿ ನಿಂದಿಸಲು ಆರಂಭಿಸಿದ್ದಾಳೆ. ಸಕಲ ಸೌಲಭ್ಯದ ಕಾರಣಕ್ಕೆ ನೀವುಗಳು ಇಲ್ಲಿಗೆ ಬರುತ್ತೀರಿ. ನಿಮ್ಮ ದೇಶಕ್ಕೆ ಹಿಂದಿರುಗಿ ಎಂದು ಕಿರುಚಾಡಿದ್ದಾಳೆ. ಜೊತೆಗೆ ನಿಮ್ಮ ದೇಶವನ್ನು ನಾನು ದ್ವೇಷಿಸುತ್ತೇನೆ ಎಂದು ಬೊಬ್ಬೆ ಹೊಡೆದಿದ್ದಾಳೆ.

ಭಾರತೀಯ ಮೂಲದ ಹಿರಿಯ ಮಹಿಳೆಯೊಬ್ಬರು ಆಕೆಗೆ ತಿಳಿ ಹೇಳಲು ಪ್ರಯತ್ನಿಸಿದರೂ ಸುಮ್ಮನಾಗಿಲ್ಲ. ಜೊತೆಗೆ ಆಕೆಯ ಬಳಿ ಗನ್ ಸಹ ಇತ್ತು ಎಂದು ಹೇಳಲಾಗಿದ್ದು, ಅದೃಷ್ಟವಶಾತ್ ಭಾರತೀಯ ಮೂಲದವರಿಗೆ ಇದರಿಂದ ಅಪಾಯವಾಗಿಲ್ಲ.

— BrooklynDad_Defiant!☮️ (@mmpadellan) August 25, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...