alex Certify Shocking News: ಅಪ್ರಾಪ್ತ ಬಾಲಕಿಗೆ ಬಸ್ ನಲ್ಲಿ ತಾಳಿ ಕಟ್ಟಿದ ಹುಡುಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಅಪ್ರಾಪ್ತ ಬಾಲಕಿಗೆ ಬಸ್ ನಲ್ಲಿ ತಾಳಿ ಕಟ್ಟಿದ ಹುಡುಗ..!

ಚೆನೈ: ಇಲ್ಲೊಬ್ಬ 17 ವರ್ಷದ ಹುಡುಗ ಬಸ್ ನಲ್ಲಿ ಪಿಯು ಓದುತ್ತಿದ್ದ ಹುಡುಗಿಗೆ ತಾಳಿ ಕಟ್ಟಿದ್ದಾನೆ. ಈ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹುಡುಗಿ 16 ವರ್ಷದವಳಾಗಿದ್ದರಿಂದ ಹುಡುಗನನ್ನು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಬಂಧಿಸಿದ್ದಾರೆ.

ಇನ್ನು ಬಾಲಕಿಗೆ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿಯಲ್ಲಿ ಕೌನ್ಸಿಲಿಂಗ್ ಕೊಡಿಸಲಾಗಿದೆ. ಜೊತೆಗೆ ಹುಡುಗನನ್ನು ಕಡಲೂರಿನಲ್ಲಿರುವ ಬಾಲಾಪರಾಧಿ ವೀಕ್ಷಣಾಲಯದಲ್ಲಿ ಇರಿಸಲಾಗಿದೆ. ಇನ್ನು ಈ ಘಟನೆ ಸಂಬಂಧ ಬಾಲಾಜಿ ಎಂಬಾತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನಂತೆ. ಹೀಗಾಗಿ ಕಡಲೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಇನ್ನು ಈ ಹುಡುಗರು ಅಪ್ರಾಪ್ತರಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಹೀಗಾಗಿ ಬಾಲಾಜಿ ವಿರುದ್ಧ ಬಾಲನ್ಯಾಯ ಕಾಯ್ದೆ, ಮಹಿಳಾ ಕಿರುಕುಳ ತಡೆ ಕಾಯ್ದೆ ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆಯಂತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...