alex Certify ಬಿಸಿ ಸಾರಿನ ಕಡಾಯಿಗೆ ಬಿದ್ದು ಯುವಕ ಸಾವು; ಅರೆಕಾಲಿಕ ಉದ್ಯೋಗಿಯಾಗಿ ಅಡುಗೆ ಕೆಲಸಕ್ಕೆ ಬಂದಿದ್ದ ನತದೃಷ್ಟ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಸಾರಿನ ಕಡಾಯಿಗೆ ಬಿದ್ದು ಯುವಕ ಸಾವು; ಅರೆಕಾಲಿಕ ಉದ್ಯೋಗಿಯಾಗಿ ಅಡುಗೆ ಕೆಲಸಕ್ಕೆ ಬಂದಿದ್ದ ನತದೃಷ್ಟ ವಿದ್ಯಾರ್ಥಿ

ಆಘಾತಕಾರಿ ಸುದ್ದಿಯೊಂದರಲ್ಲಿ, ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಬಿಸಿಯಾದ ಸಾರಿನ ಕಡಾಯಿಗೆ ಬಿದ್ದು 21 ವರ್ಷದ ಯುವಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆ. ಸಂತ್ರಸ್ತ ಕಾಲೇಜು ವಿದ್ಯಾರ್ಥಿಯಾಗಿದ್ದು, ಅಡುಗೆ ಸಂಸ್ಥೆಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ.

ಕಳೆದ ವಾರ ಮದುವೆ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ಊಟ ಬಡಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅತಿಥಿಗಳಿಗೆ ಬಡಿಸಲು ಉದ್ದೇಶಿಸಿದ್ದ ಸಾರನ್ನು ಕುದಿಸುತ್ತಿರುವಾಗ ಕಡಾಯಿಗೆ ಬಿದ್ದು ಈ ಘಟನೆ ನಡೆದಿದೆ.

ತೀವ್ರ ಸುಟ್ಟಗಾಯಗಳಾಗಿರುವ ಯುವಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...