ಮನೆಯ ಬಾಡಿಗೆ ಪಾವತಿ ಮಾಡುವ ವಿಚಾರದಲ್ಲಿ ಬಾಡಿಗೆದಾರರು ಪ್ರಾಮಾಣಿಕರಾಗಿ ಇದ್ದಷ್ಟು ಮನೆ ಮಾಲೀಕರು ಸಹ ಆರಾಮಾಗಿ ಇರುತ್ತಾರೆ. ಅದೇ ರೀತಿ ಮನೆಯನ್ನ ಕಟ್ಟಿಸಿಕೊಂಡ ಬಳಿಕ ಗುತ್ತಿಗೆದಾರರಿಗೆ ಹಣವನ್ನ ನೀಡೋದು ಕೂಡ ಮನೆ ಮಾಲೀಕನ ಕರ್ತವ್ಯವಾಗಿರುತ್ತೆ.
ಆದರೆ ಕೆಲವೊಮ್ಮೆ ಗ್ರಾಹಕರು ತಮ್ಮ ಕೆಲಸ ಮುಗಿದ ಬಳಿಕ ಬಿಲ್ಡರ್ಗಳಿಗೆ ಹಣ ಪಾವತಿ ಮಾಡಲು ಉದಾಸೀನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಬಿಲ್ಡರ್ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸದ ಗ್ರಾಹಕನಿಗೆ ನೀಡಿದ ಶಾಸ್ತಿ ನೋಡಿದ್ರೆ ಇನ್ಯಾರೂ ಇಂತಹ ತಪ್ಪನ್ನ ಮಾಡಲಿಕ್ಕೇ ಇಲ್ಲ ಎಂದರೆ ತಪ್ಪಾಗಲಾರದು.
ನೋಡ ನೋಡುತ್ತಿದ್ದಂತೆಯೇ ಮೂರು ಕಾರುಗಳನ್ನ ನುಂಗಿ ಹಾಕಿದ ಸಿಂಕ್ ಹೋಲ್..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಇಂಗ್ಲೆಂಡ್ನ ಸ್ಟೋನಿಗೇಟ್ನ ಗಿಲ್ಡ್ಫೋರ್ಡ್ ರಸ್ತೆಯಲ್ಲಿ ಮನೆ ಕಟ್ಟಿಸಿಕೊಂಡ ಬಳಿಕ ಬಿಲ್ಡರ್ಗೆ ಹಣ ಪಾವತಿ ಮಾಡಲು ಗ್ರಾಹಕರು ವಿಳಂಬ ಮಾಡಿದ್ದರು. ಗ್ರಾಹಕರು ರಜೆಗೆಂದು ಮನೆಯಿಂದ ಹೊರ ಹೋಗೋದನ್ನೇ ಕಾಯುತ್ತಿದ್ದ ಗುತ್ತಿಗೆದಾರ ಅವರ ಮನೆಯನ್ನ ಧ್ವಂಸ ಮಾಡಿದ್ದಾನೆ..!
ವರ ಗುಟ್ಕಾ ಹಾಕಿದ ಕಾರಣಕ್ಕೆ ಮುರಿದುಬಿತ್ತು ಮದುವೆ..!
ಇದರಿಂದ ಪಾದಚಾರಿ ಮಾರ್ಗ ಹಾಳಾಗಿದ್ದು ನೆರೆಮನೆಯವರು ಅಸಮಾಧಾನಗೊಂಡಿದ್ದಾರೆ. ಬಿಲ್ಡರ್ ತಾವು ಹೇಳಿದಂತೆ ಕೆಲಸ ಮಾಡಿರಲಿಲ್ಲ. ಇದೀಗ ಈ ರೀತಿ ಮನೆಯನ್ನೇ ಧ್ವಂಸ ಮಾಡಿದ್ದಾನೆ. ನಾವು ಅತ್ಯಂತ ಕೆಟ್ಟ ಗುತ್ತಿಗೆದಾರನನ್ನ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಮನೆ ಮಾಲೀಕ ಅಸಮಾಧಾನ ಹೊರಹಾಕಿದ್ದಾನೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.