alex Certify SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಕೃತ್ಯ : ಅಣ್ಣನಿಂದಲೇ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಕೃತ್ಯ : ಅಣ್ಣನಿಂದಲೇ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ

ಕಲಬುರಗಿ : ಎಸ್ ಎಸ್ ಎಲ್ ಸಿ ಓದುತ್ತಿದ್ದ 15 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರಗಿ ಜಿಲ್ಲೆಯ ಅಳಂದದಲ್ಲಿ ನಡೆದಿದೆ.

ಈಕೆ ಗರ್ಭಿಣಿಯಾಗಲು ಕಾರಣ ಬಾಲಕಿಯ ದೊಡ್ಡಪ್ಪನ ಮಗ . ಹೌದು, ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದ ದೊಡ್ಡಪ್ಪನ ಮಗ ಈಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಶಾಲೆಯಲ್ಲಿ ವಾಸವಾಗಿದ್ದ ಈಕೆ ಮನೆಗೆ ಬಂದಾಗಲೆಲ್ಲ ಆಕೆಯ ಅಣ್ಣ ಆಕೆಯನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದನು ಎನ್ನಲಾಗಿದೆ.

ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಆಕೆ ಯಾರಿಗೂ ಈ ವಿಚಾರವನ್ನು ಹೇಳಿರಲಿಲ್ಲ. ಈ ನಡುವೆ ಆಕೆ ಗರ್ಭಿಣಿಯಾಗಿದ್ದಳು. ಆದರೆ ಆಕೆ ಗರ್ಭಿಣಿಯಾಗಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ಡಿಸೆಂಬರ್ 24ರಂದು ಶಾಲೆಯಲ್ಲಿ ಇದ್ದಾಗ ಆಕೆಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ, ಕೂಡಲೇ ಈಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ನಂತರ ವಿಚಾರ ಬೆಳಕಿಗೆ ಬಂದಿದೆ. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಿಂಬರ್ಗಾ ಪೊಲೀಸರು ವಿದ್ಯಾರ್ಥಿನಿಯನ್ನು ವಿಚಾರಣೆ ನಡೆಸಿದಾಗ ನಡೆದ ಘಟನೆ ಬಗ್ಗೆ ಬಾಲಕಿ ಹೇಳಿದ್ದಾಳೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...