alex Certify Shocking: 40 ನೇ ಮಹಡಿಯಿಂದ ಕುಸಿದ ಲಿಫ್ಟ್​; ಓರ್ವ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: 40 ನೇ ಮಹಡಿಯಿಂದ ಕುಸಿದ ಲಿಫ್ಟ್​; ಓರ್ವ ಸಾವು

40ನೇ ಮಹಡಿಯಿಂದ ಲಿಫ್ಟ್ ಕುಸಿದ ಪರಿಣಾಮ 43 ವರ್ಷದ ವ್ಯಕ್ತಿಯು ಸಾವನ್ನಪ್ಪಿದ ಘಟನೆಯು ಮುಂಬೈನ ಗ್ರಾಂಟ್​ ರಸ್ತೆಯಲ್ಲಿ ಸಂಭವಿಸಿದೆ. ಈ ದುರಂತದಲ್ಲಿ 26 ವರ್ಷದ ಯುವಕನಿಗೆ ಗಾಯಗಳಾಗಿವೆ. ಇಬ್ಬರೂ ಲಿಫ್ಟ್​ ರಿಪೇರಿ ಮಾಡುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕಟ್ಟಡದ ಮಾಲೀಕ ದೇವೆನ್​ ದಾನಿ, ಕಳೆದ 2 ದಿನಗಳಿಂದ ಲಿಫ್ಟ್ ಕೆಲಸ ಮಾಡುತ್ತಿರಲಿಲ್ಲ. ನಾವು 2008ರಿಂದಲೂ ಸಿಟಿ ಲಿಫ್ಟ್​ ಇಂಡಿಯಾಗೆ ಲಿಫ್ಟ್​​ನ ನಿರ್ವಹಣಾ ಕೆಲಸವನ್ನು ನೋಡಿಕೊಳ್ಳಲು ಗುತ್ತಿಗೆ ನೀಡಿದ್ದೇವೆ. ಲಿಫ್ಟ್​ 40ನೇ ಮಹಡಿಯಲ್ಲಿತ್ತು. 26 ವರ್ಷದ ಅನುಭವ್​ ತ್ರಿಪಾಠಿ ಹಾಗೂ 43 ವರ್ಷದ ಸೂರ್ಯಕಾಂತ್​ ಪೂಜಾರಿ ಲಿಫ್ಟ್​ನಲ್ಲಿದ್ದರು. ಕೆಲ ಸಮಯದ ಬಳಿಕ ಲಿಫ್ಟ್​ನಲ್ಲಿ ದೊಡ್ಡ ಶಬ್ದ ಕೇಳಿತು. ಅಷ್ಟರಲ್ಲಾಗಲೇ ಲಿಫ್ಟ್​ ಕುಸಿದುಬಿದ್ದಿತ್ತು. ಇಬ್ಬರನ್ನೂ ತಕ್ಷಣವೇ ಲಿಫ್ಟ್​ನಿಂದ ಹೊರತೆಗೆಯಲಾಯ್ತು. ಅನುಭವ್​​ಗೆ ಪ್ರಜ್ಞೆ ಇತ್ತು ಆದರೆ ಅವರಿಗೆ ತೀವ್ರ ಗಾಯಗಳಾಗಿತ್ತು. ಇತ್ತ ಸೂರ್ಯಕಾಂತ್​ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ಹೇಳಿದರು.

ಘಟನೆಯಲ್ಲಿ ಗಾಯಗೊಂಡ ತ್ರಿಪಾಠಿಯನ್ನು ಹೆಚ್​ಎನ್​ ರಿಲಯನ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೂ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇತ್ತ ಪೂಜಾರಿಯನ್ನು ಸರ್​ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರು ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...