ದೆಹಲಿಯ ಸ್ಪಾವೊಂದರ ಜಾಹೀರಾತು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರೇ ತಮ್ಮ ಟ್ವೀಟ್‌ನಲ್ಲಿ ಎಲ್ಇಡಿ ಬೋರ್ಡ್ ನಲ್ಲಿ ಆಕ್ಷೇಪಾರ್ಹ ಜಾಹೀರಾತನ್ನು ಪ್ರದರ್ಶಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಸ್ಪಾ ವೀಡಿಯೊದಲ್ಲಿ, ನವದೆಹಲಿಯಲ್ಲಿ ಸ್ಪಾ ಎಂದು ಕರೆಯಲ್ಪಡುವ ಜಾಹೀರಾತನ್ನು ನೋಡಬಹುದು. ಇದರೊಟ್ಟಿಗೆ ಸೆಕ್ಸ್ ರಾಕೆಟ್ ನಡೆಯುತ್ತಿದೆ ಎಂದು ಬೋರ್ಡ್‌ನಲ್ಲಿರುವಂತೆ ಕಾಣಿಸುತ್ತದೆ. “ರಷ್ಯನ್ @ ರೂ. 20,000… ಸೆಕ್ಸ್ ಮಾರ್ಕೆಟ್, ರೂ. 2000 ನಲ್ಲಿ p***y” ಎಂದು ಬರೆಯಲಾಗಿದೆ.
ಮಾಲಿವಾಲ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡು, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ದೆಹಲಿ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಕೋರಿದ್ದಾರೆ.
ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ
“ನಾಚಿಕೆಗೇಡು, ಸ್ಪಾಗಳು ಸೆಕ್ಸ್ ರಾಕೆಟ್ ನಡೆಸುತ್ತಿವೆ. ಎಂಸಿಡಿ ಮತ್ತು ದೆಹಲಿ ಪೊಲೀಸರಿಗೆ ಹೆದರುತ್ತಿಲ್ಲ” ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಬಾರಿ ಶೇರ್ ಮಾಡಿದ್ದಾರೆ.
ಕೆಲವರು ಸ್ಪಾವನ್ನು ಟೀಕಿಸಿದರೆ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ, ಕೆಲವರು ಈ ವಿಡಿಯೊ ನಕಲಿ ಮತ್ತು ವದಂತಿ ಹರಡಲು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.