alex Certify Shocking: ನವಜಾತ ಶಿಶುವಿನ ಶವ ಕಚ್ಚಿ ತಿನ್ನಲು ಯತ್ನಿಸಿದ ನಾಯಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ನವಜಾತ ಶಿಶುವಿನ ಶವ ಕಚ್ಚಿ ತಿನ್ನಲು ಯತ್ನಿಸಿದ ನಾಯಿಗಳು..!

ಅದೊಂದು ಭಯಾನಕ ಘಟನೆ. ಶಿಮ್ಲಾದಲ್ಲಿ ನಡೆದಿರೋ ಈ ಘಟನೆ ರೀತಿ ನೋಡ್ತಿದ್ರೇನೆ, ಗಟ್ಟಿಗುಂಡಿಗೆಯವರು ಕೂಡಾ ಬೆಚ್ಚಿಬಿದ್ದು ಬಿಡ್ತಾರೆ. ನಿರ್ಮಾಣ ಹಂತದಲ್ಲಿರೋ ಕಟ್ಟಡವೊಂದರಲ್ಲಿ ನವಜಾತ ಶಿಶುವಿನ ಮೃತ ದೇಹವನ್ನ ಅಲ್ಲಿರುವ ಬೀದಿ ನಾಯಿಗಳು ಕಚ್ಚಿ ತಿನ್ನಲು ಯತ್ನಿಸಿವೆ.

ಅದು ಶಿಮ್ಲಾದ ಮೆಹ್ಲಿ ಅನ್ನೋ ಪಟ್ಟಣ. ಅಲ್ಲಿ ಕಟ್ಟಡವೊಂದು ನಿರ್ಮಾಣದ ಹಂತದಲ್ಲಿತ್ತು. ಅದೇ ಕಟ್ಟಡದ ಲ್ಯಾಂಟರ್ನ್ ಅಡಿಯಲ್ಲಿ, ಯಾರೋ ನವಜಾತ ಶಿಶುವಿನ ಮೃತದೇಹವನ್ನ ಇಟ್ಟು ಹೋಗಿದ್ದಾರೆ. ಅದೇ ದೇಹವನ್ನ ತಿನ್ನಲು ನಾಯಿಗಳು ಮುಗಿ ಬಿದ್ದಿವೆ. ಇದನ್ನ ಅಲ್ಲಿದ್ದವರು ಕೆಲವರು ಗಮನಿಸಿದ್ದಾರೆ.

ಸ್ಥಳೀಯರಿಂದ ಮಾಹಿತಿ ಬಂದ ತಕ್ಷಣ ಪೊಲೀಸರು, ಫೋರೆನ್ಸಿಕ್ ತಂಡದೊಂದಿಗೆ ಬಂದು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಪೊಲೀಸ್ ಪಡೆ ಮೃತದೇಹವನ್ನ ವಶಕ್ಕೆ ಪಡೆದು, ಬಳಿಕ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಮಗುವಿನ ಶವ ಯಾರದ್ದು ? ಇಲ್ಲಿ ಹೇಗೆ ಬಂತು ? ಅನ್ನೋ ತನಿಖೆ ಈಗಾಗಲೇ ಆರಂಭವಾಗಿದೆ. ಈ ಕೃತ್ಯ ಮಾಡಿದ್ದೂ ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ಪಿ ಮಂಗಲ್ರಾಮ್ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...