ಕಳೆದ ಎರಡು ತಿಂಗಳಿನಿಂದ ನಟಿಯ ಮನೆಗೆ ಸೆಕ್ಸ್ ಟಾಯ್ಸ್ ಹಾಗೂ ಒಳ ಉಡುಪುಗಳನ್ನು ಕಳುಹಿಸಿಕೊಡುತ್ತಿದ್ದ ಅಪರಿಚಿತನ ಪತ್ತೆಗೆ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ಬಲೆ ಬೀಸಿದ್ದಾರೆ.
ಮೊದ ಮೊದಲು ನಟಿ ಈ ಕೃತ್ಯವನ್ನು ನಿರ್ಲಕ್ಷಿಸಿದ್ದರು. ಆದರೆ ಈ ದುಷ್ಕೃತ್ಯ ಪದೇ ಪದೇ ಮರುಕಳಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ 2 ತಿಂಗಳಿನಿಂದ ನಟಿಗೆ ಕನಿಷ್ಟ 7-8 ಬಾರಿ ಸೆಕ್ಸ್ ಟಾಯ್ಸ್ ಹಾಗೂ ಒಳ ಉಡುಪುಗಳನ್ನು ಕಳುಹಿಸಲಾಗಿದೆ.
ಜೋಗೇಶ್ವರಿ ನಿವಾಸಿಯಾದ 28 ವರ್ಷದ ನಟಿ ಕಳೆದ 2 ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ ಪಾರ್ಸೆಲ್ ಸ್ವೀಕರಿಸಿದ್ದರು. ಮೊದಲು ಯಾರೋ ತಮಾಷೆ ಮಾಡುತ್ತಿದ್ದಾರೆ ಎಂದೇ ನಟಿ ಭಾವಿಸಿದ್ದರು. ಇದಾದ ಬಳಿಕ ಪಾರ್ಸೆಲ್ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಇದರಿಂದ ಬೇಸತ್ತ ನಟಿ ಅಂಬೋಲಿ ಠಾಣೆಗೆ ದೂರು ನೀಡಿದ್ದಾರೆ.
ಆರ್ಡರ್ ಮಾಡಿದ ಮೊಬೈಲ್ ಸಂಖ್ಯೆ, ಶಾಪಿಂಗ್ ಪೋರ್ಟಲ್ಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಕೃತ್ಯ ಎಸಗಿದ ದುಷ್ಕರ್ಮಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಂಬೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.