alex Certify Shocking: ನಟಿ ನಿವಾಸಕ್ಕೆ ಒಳ ಉಡುಪು, ಸೆಕ್ಸ್ ಟಾಯ್ಸ್​ ಕಳುಹಿಸಿದ ಅಪರಿಚಿತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ನಟಿ ನಿವಾಸಕ್ಕೆ ಒಳ ಉಡುಪು, ಸೆಕ್ಸ್ ಟಾಯ್ಸ್​ ಕಳುಹಿಸಿದ ಅಪರಿಚಿತ…!

ಕಳೆದ ಎರಡು ತಿಂಗಳಿನಿಂದ ನಟಿಯ ಮನೆಗೆ ಸೆಕ್ಸ್ ಟಾಯ್ಸ್​ ಹಾಗೂ ಒಳ ಉಡುಪುಗಳನ್ನು ಕಳುಹಿಸಿಕೊಡುತ್ತಿದ್ದ ಅಪರಿಚಿತನ ಪತ್ತೆಗೆ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ಬಲೆ ಬೀಸಿದ್ದಾರೆ.

ಮೊದ ಮೊದಲು ನಟಿ ಈ ಕೃತ್ಯವನ್ನು ನಿರ್ಲಕ್ಷಿಸಿದ್ದರು. ಆದರೆ ಈ ದುಷ್ಕೃತ್ಯ ಪದೇ ಪದೇ ಮರುಕಳಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ 2 ತಿಂಗಳಿನಿಂದ ನಟಿಗೆ ಕನಿಷ್ಟ 7-8 ಬಾರಿ ಸೆಕ್ಸ್​ ಟಾಯ್ಸ್​ ಹಾಗೂ ಒಳ ಉಡುಪುಗಳನ್ನು ಕಳುಹಿಸಲಾಗಿದೆ.

ಜೋಗೇಶ್ವರಿ ನಿವಾಸಿಯಾದ 28 ವರ್ಷದ ನಟಿ ಕಳೆದ 2 ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ ಪಾರ್ಸೆಲ್​ ಸ್ವೀಕರಿಸಿದ್ದರು. ಮೊದಲು ಯಾರೋ ತಮಾಷೆ ಮಾಡುತ್ತಿದ್ದಾರೆ ಎಂದೇ ನಟಿ ಭಾವಿಸಿದ್ದರು. ಇದಾದ ಬಳಿಕ ಪಾರ್ಸೆಲ್​ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಇದರಿಂದ ಬೇಸತ್ತ ನಟಿ ಅಂಬೋಲಿ ಠಾಣೆಗೆ ದೂರು ನೀಡಿದ್ದಾರೆ.

ಆರ್ಡರ್​ ಮಾಡಿದ ಮೊಬೈಲ್​ ಸಂಖ್ಯೆ, ಶಾಪಿಂಗ್​ ಪೋರ್ಟಲ್​ಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಕೃತ್ಯ ಎಸಗಿದ ದುಷ್ಕರ್ಮಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಂಬೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...