alex Certify SHOCKING: ಎಸಿಬಿ ಅಧಿಕಾರಿಯನ್ನೇ ಥಳಿಸಿದ ಶಾಸಕನ ಬೆಂಬಲಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಎಸಿಬಿ ಅಧಿಕಾರಿಯನ್ನೇ ಥಳಿಸಿದ ಶಾಸಕನ ಬೆಂಬಲಿಗರು..!

ದೆಹಲಿ: ತಮ್ಮ ಶಾಸಕನ ವಿಚಾರಣೆ ಮಾಡಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಯನ್ನೇ ಶಾಸಕನ ಬೆಂಬಲಿಗರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲದಲ್ಲಿ ವೈರಲ್ ಆಗ್ತಾ ಇದೆ.

ಹೌದು, ಎಎಪಿ ಶಾಸಕ ಅಮಾನತುಲ್ಲಾ ಅವರನ್ನು ವಕ್ಫ್ ಮಂಡಳಿ ನೇಮಕಾತಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಾಗಿತ್ತು. ಅದಕ್ಕೂ ಮುನ್ನ ಅವರ ಮನೆ, ಕಚೇರಿ ಸೇರಿದಂತೆ ಕೆಲವೊಂದು ಕಡೆ ಶೋಧ ಕಾರ್ಯ ನಡೆಸಿತ್ತು ಎಸಿಬಿ.

ಈ ವೇಳೆ ಅಮಾನತುಲ್ಲಾ ಅವರಿಗೆ ಸೇರಿದ 24 ಲಕ್ಷದ ಹಣ ಹಾಗೂ ಎರಡು ಪರವಾನಿಗೆ ಪಡೆಯದ ಶಸ್ತ್ರಾಸ್ತ್ರ ಪತ್ತೆಯಾಗಿದ್ದವು. ಈ ಬೆನ್ನಲ್ಲೇ ಶುಕ್ರವಾರ ಅವರನ್ನು ಬಂಧಿಸಲಾಗಿತ್ತು.

ಈ ವೇಳೆ ಎಸಿಬಿ ಅಧಿಕಾರಿಯನ್ನು ಅವರ ಬೆಂಬಲಿಗರು ಥಳಿಸಿದ್ದಾರೆ. ಗುಂಪು ಕಟ್ಟಿಕೊಂಡು ಬಂದು ಅಧಿಕಾರಿಗಳನ್ನು ತಳ್ಳಿದ್ದಾರೆ. ಇನ್ನು ಅಮಾನತುಲ್ಲಾ ಜೊತೆಗೆ ಅವರ ಆಪ್ತ ಹಮೀದ್ ಅಲಿಯವರನ್ನೂ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...