ಬಾಲ ಶಿವ ಪಾತ್ರಕ್ಕೆ ಹೆಸರು ವಾಸಿಯಾಗಿರುವ ನಟಿ ಶಿವ್ಯಾ ಪಠಾನಿಯಾ ತಾವು ಅನುಭವಿಸಿದ ಸಂಕಟ ಹೊರ ಜಗತ್ತಿಗೆ ಬಹಿರಂಗಪಡಿಸಿದ್ದಾರೆ.
ಆಕೆಯ ಹಮ್ಸಾಫರ್ಸ್ ಕಾರ್ಯಕ್ರಮವು ಸ್ಥಗಿತಗೊಂಡ ನಂತರ ಎಂಟು ತಿಂಗಳವರೆಗೆ ಯಾವುದೇ ಕೆಲಸವಿಲ್ಲದ ಕುಗ್ಗಿಹೋಗಿದ್ದರಂತೆ. ಅದೇ ಸಮಯದಲ್ಲಿ, ಒಬ್ಬ ವ್ಯಕ್ತಿ ಲೈಂಗಿಕ ಸಹಕಾರಕ್ಕೆ ಪ್ರತಿಯಾಗಿ ಕೆಲಸ ಕೊಡುವುದಾಗಿ ಮುಂದೆ ಬಂದಿದ್ದ ಎಂದು ಆಕೆ ಬಹಿರಂಗಪಡಿಸಿದ್ದಾರೆ.
ಜಾಹೀರಾತು ಚಿತ್ರವೊಂದರ ನಿರ್ಮಾಪಕರು, ಪ್ರಾಜೆಕ್ಟ್ ಮಾಡಲು ಬಯಸಿದರೆ ದೊಡ್ಡ ಸೆಲೆಬ್ರಿಟಿಯೊಂದಿಗೆ “ರಾಜಿ ಮಾಡಿಕೊಳ್ಳಿ’ ಎಂದು ಆಕೆಯನ್ನು ಉದ್ದೇಶಿಸಿ ಹೇಳಿದ್ದರಂತೆ
ಸಂದರ್ಶನವೊಂದಲ್ಲಿ ಇದನ್ನು ನೆನಪಿಸಿಕೊಂಡಿರುವ ಆಕೆ, “ನನಗೆ ಸಾಂತಾಕ್ರೂಜ್ನಲ್ಲಿ ಆಡಿಷನ್ಗೆ ಕರೆದರು. ನಾನು ಕೋಣೆಗೆ ಪ್ರವೇಶಿಸಿದೆ, ಅದು ತುಂಬಾ ಚಿಕ್ಕದಾಗಿತ್ತು. ಆ ವ್ಯಕ್ತಿ ನೀವು ಈ ಜಾಹೀರಾತನ್ನು ಮಾಡಲು ಬಯಸುತ್ತೀರಾ ಹಾಗಿದ್ದರೆ ದೊಡ್ಡ ಸೆಲೆಬ್ರಿಟಿ ಜೊತೆ ನೀವು ರಾಜಿ ಮಾಡಿಕೊಳ್ಳಬೇಕಾತ್ತದೆ ಎಂದರು ಎಂದು ಆಕೆ ಹೇಳಿಕೊಂಡಿದ್ದಾರೆ.
“ನಾನು ಎಂದಿಗೂ ಮರೆಯಲಾಗದ ತಮಾಷೆಯ ಭಾಗವೆಂದರೆ ಆತನ ಲ್ಯಾಪ್ಟಾಪ್ನಲ್ಲಿ ಹನುಮಾನ್ ಚಾಲೀಸಾ ಬರುತ್ತಾ ಇತ್ತು, ನಾನು ನಗಲು ಪ್ರಾರಂಭಿಸಿ, ನಿಮಗೆ ನಾಚಿಕೆ ಆಗುವುದಿಲ್ಲವೇ ಹೀಗೇ ಹೇಳಲು ಎಂದು ಕೇಳಿದೆ. ವರ್ಷಗಳ ನಂತರ, ಆ ವ್ಯಕ್ತಿಯ ಕಂಪನಿ ನಕಲಿ ಎಂದು ಅರಿವಿಗೆ ಬಂತು” ಎಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.