alex Certify ಜೈಲಿನ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಶಾಕ್: ಕಾರಾಗೃಹದಲ್ಲಿ ಏನೆಲ್ಲಾ ಸಿಕ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಶಾಕ್: ಕಾರಾಗೃಹದಲ್ಲಿ ಏನೆಲ್ಲಾ ಸಿಕ್ತು ಗೊತ್ತಾ…?

ಶಿವಮೊಗ್ಗ: ಶಿವಮೊಗ್ಗ ಸೆಂಟ್ರಲ್ ಜೈಲಿನ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಕಾರಾಗೃಹದಲ್ಲಿ ಸಿಗರೇಟ್, ಬೀಡಿ ಸೇರಿದಂತೆ ಹಲವು ವಸ್ತುಗಳು ಕಂಡು ಬಂದಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲಾ ಪೊಲೀಸ್‌ ಅಧೀಕ್ಷಕರ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ, ಪೊಲೀಸ್‌ ಉಪಾಧೀಕ್ಷಕ, ಪೊಲೀಸ್‌ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಕೇಂದ್ರ ಕಾರಾಗೃಹದಲ್ಲಿ ದಾಳಿ ನಡೆಸಿ ತಪಾಸಣೆ ಕೈಗೊಂಡಿದೆ.

ಈ ಸಂದರ್ಭದಲ್ಲಿ ಕಾರಾಗೃಹದ ಒಳಗೆ ತಂಬಾಕು ಉತ್ಪನ್ನಗಳಾದ ಬೀಡಿ ಮತ್ತು ಸಿಗರೇಟ್, ಬೆಂಕಿ ಪೊಟ್ಟಣಗಳು, ಲೈಟರ್ ಗಳು ಹಾಗೂ ಪ್ಲಾಸ್ಟಿಕ್ ಬಾಟಲ್ ನಿಂದ ಮಾರ್ಪಡಿಸಿ ತಯಾರಿಸಿದ ತಂಬಾಕು ಸೇದುವ ಚಿಲುಮೆ(ಹುಕ್ಕ) ಗಳು ದೊರೆತಿದ್ದು, ಸದರಿ ವಸ್ತುಗಳನ್ನು  ಅಮಾನತ್ತು ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...