alex Certify ಮೊದಲ ಚಿತ್ರದ ಶೂಟಿಂಗ್‌ ನಡೆದ ಸ್ಥಳಕ್ಕೆ 29 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಚಿತ್ರದ ಶೂಟಿಂಗ್‌ ನಡೆದ ಸ್ಥಳಕ್ಕೆ 29 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಭೇಟಿ

ನಟಿ ಶಿಲ್ಪಾ ಶೆಟ್ಟಿ ತಮ್ಮ‌ ಅಭಿಮಾನಿಗಳಿಗೆ, ಅವರ ವೃತ್ತಿ ಜೀವನ ಪ್ರಾರಂಭಿಸಿದ ಸ್ಥಳದ ಸಂಪೂರ್ಣ ನೋಟವನ್ನ ಸಣ್ಣ ವಿಡಿಯೋ ಮೂಲಕ ನೀಡಿದ್ದಾರೆ. ಸುಮಾರು ಮೂರು ದಶಕಗಳ ಹಿಂದೆ ಬಾಜಿಗರ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ ಸ್ಥಳದ ವಿಡಿಯೋ ಹಂಚಿಕೊಂಡಿರುವ ಶಿಲ್ಪಾ ತಮ್ಮ ಹೊಸ ಜರ್ನಿಯ ಮಾಹಿತಿಯನ್ನು ನೀಡಿದ್ದಾರೆ. ಏರೀಯಲ್ ವ್ಯೂನಲ್ಲಿ ಸೆರೆಯಾಗಿರುವ ವೀಡಿಯೊದಲ್ಲಿ ಶಿಲ್ಪಾ ಶೆಟ್ಟಿ, ನಾನು 29 ವರ್ಷಗಳ ಹಿಂದೆ ಈ ಸ್ಥಳದಿಂದ ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದೆ. ಈಗ ಇಂಡಿಯಾಸ್ ಗಾಟ್ ಟ್ಯಾಲೆಂಟ್ ನ ದಿ ಸ್ಟಂಟ್ ಯಾರ್ಡ್‌ ಸೀಸನ್ ಗಾಗಿ ಇಲ್ಲಿಗೆ ಹಿಂತಿರುಗಿದ್ದೇನೆ ಎಂದಿದ್ದಾರೆ.

ಮುಂಬೈನ ಫಿಲ್ಮ್ ಸಿಟಿಯಲ್ಲಿನ ಹೆಲಿಪ್ಯಾಡ್ ಮೇಲೆ ಇಂಡಿಯಾಸ್ ಗಾಟ್ ಟ್ಯಾಲೆಂಟ್ ನ ಪ್ರೋಮೊ ವಿಡಿಯೋ ಶೂಟ್ ಆಗಿದ್ದು, ಶಿಲ್ಪಾ ಅವರ ಸಿನಿ ಜರ್ನಿಯು ಇದೇ ಜಾಗದಲ್ಲಿ ಶುರುವಾಯಿತು‌. ಬಾಜಿಗಾರ್ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಎವರ್ ಗ್ರೀನ್ ಸುಂದರಿ ಶಿಲ್ಪಾ ಈಗ ಇಂಡಿಯಾಸ್ ಗಾಟ್ ಟ್ಯಾಲೆಂಟ್ ನ ಹೊಸ ಆವೃತ್ತಿಯ ಜಡ್ಜ್ ಆಗಿ ತಮ್ಮ ಹೊಸ ಜರ್ನಿಯನ್ನು ಶುರು ಮಾಡಿದ್ದಾರೆ.

1993ರಲ್ಲಿ ಬಾಜಿಗರ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಶಿಲ್ಪಾಶೆಟ್ಟಿ, ಮೇ ಕಿಲಾಡಿ ಥೂ ಅನಾಡಿ, ದಡ್ಕನ್, ಇಂಡಿಯನ್, ಅಪ್ನೇ, ಲೈಫ್ ಇನ್ ಅ ಮೆಟ್ರೋ, ದಸ್, ಫಿರ್ ಮಿಲೇಂಗೆ, ಹಂಗಾಮ 2 ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಝಲಕ್ ದಿಖ್ಲಾ ಜಾ, ಜರಾ ನಚ್ಕೆ ದಿಖಾ, ನಚ್ ಬಲಿಯೆ ಮತ್ತು ಸೂಪರ್ ಡ್ಯಾನ್ಸರ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಪತಿ ರಾಜ್ ಕುಂದ್ರಾ ಅವರ ಬಂಧನದ ನಂತರ ಶಿಲ್ಪಾ ಅವ್ರನ್ನ ಸೂಪರ್ ಡ್ಯಾನ್ಸರ್ ರಿಯಾಲಿಟಿ ಶೋನಿಂದ ಕೈಬಿಡಲಾಗಿತ್ತು. ಐಜಿಟಿಯ ಜಡ್ಜ್ ಆಗಿ ಶಿಲ್ಪಾ ಕಂಬ್ಯಾಕ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...