alex Certify Viral News: ‘ಶಿಫ್ಟ್ ಮುಗಿದಿದೆ – ದಯವಿಟ್ಟು ಮನೆಗೆ ಹೋಗಿ’; ಉದ್ಯೋಗಿಯ ಕಂಪ್ಯೂಟರ್ ಗೆ ಸಂದೇಶ ಕಳುಹಿಸಿದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral News: ‘ಶಿಫ್ಟ್ ಮುಗಿದಿದೆ – ದಯವಿಟ್ಟು ಮನೆಗೆ ಹೋಗಿ’; ಉದ್ಯೋಗಿಯ ಕಂಪ್ಯೂಟರ್ ಗೆ ಸಂದೇಶ ಕಳುಹಿಸಿದ ಕಂಪನಿ

ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳು ನಿಗದಿತ ಅವಧಿಯನ್ನೂ ಮೀರಿ ಕೆಲಸ ಮಾಡಬೇಕೆಂದು ಬಯಸುತ್ತವೆ. ಹೀಗಾಗಿ ಇಂತಹ ಕಂಪನಿಗಳ ಉದ್ಯೋಗಿಗಳು ಸದಾಕಾಲ ಒತ್ತಡದಲ್ಲಿ ಇರುತ್ತಾರೆ. ಇಂಥದರ ನಡುವೆ ಕಂಪನಿಯೊಂದರ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂದೋರ್ ಮೂಲದ ಸಾಫ್ಟ್ ಗ್ರಿಡ್ ಕಂಪ್ಯೂಟರ್ಸ್ ತನ್ನ ಉದ್ಯೋಗಿಗಳು ನಿಗದಿತ ಅವಧಿಯವರೆಗೆ ಮಾತ್ರ ಕೆಲಸ ಮಾಡಬೇಕೆಂದು ಬಯಸುತ್ತದೆ. ಅಷ್ಟೇ ಅಲ್ಲ, ಇದನ್ನು ಮೀರಿ ಉದ್ಯೋಗಿಗಳು ಕೆಲಸದಲ್ಲಿ ತೊಡಗಿಕೊಂಡಿದ್ದರೆ ಅವರ ಕಂಪ್ಯೂಟರ್ಗೆ ನಿಮ್ಮ ಶಿಫ್ಟ್ ಮುಗಿದಿದೆ. ದಯವಿಟ್ಟು ಮನೆಗೆ ಹೋಗಿ ಎಂಬ ಸಂದೇಶ ಕಳುಹಿಸುತ್ತಿದೆ.

ಇದೇ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ತನ್ವಿ ಖಂಡೆಲ್ ವಾಲಾ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಹಾಕಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಅದೃಷ್ಟ ಎಂದು ಅವರು ಹೇಳಿಕೊಂಡಿದ್ದಾರೆ.

ಸಾಫ್ಟ್ ಗ್ರಿಡ್ ಕಂಪ್ಯೂಟರ್ಸ್ ಆಡಳಿತ ಮಂಡಳಿ, ತನ್ನ ಉದ್ಯೋಗಿಗಳಿಗೂ ಖಾಸಗಿ ಬದುಕಿದೆ ಎಂಬುದನ್ನು ಪರಿಗಣಿಸುತ್ತಿದೆ ಎಂದು ಬಹುತೇಕರು ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ತನ್ವಿ ಖಂಡೆಲ್ ವಾಲಾ ಕೆಲಸದ ಅವಧಿ ಮುಗಿದ ಬಳಿಕ ತಮ್ಮ ಕಂಪ್ಯೂಟರ್ ಗೆ ಬಂದ ಸಂದೇಶದ ಫೋಟೋ ಕೂಡ ಹಾಕಿದ್ದು, ಈ ಸಂದೇಶಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...