alex Certify ಹೀಗಿದ್ದೋಳು ಹೀಗಾದಳು ಎಂದು ತೋರಿಸಲು ರೂಪದರ್ಶಿಯ ಪ್ಯಾಂಟ್​ ಒಳಗೆ ವಾಟರ್​ ಕ್ಯಾನ್…​! ಅಸಲಿ ವಿಷಯ ಇಲ್ಲಿದೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿದ್ದೋಳು ಹೀಗಾದಳು ಎಂದು ತೋರಿಸಲು ರೂಪದರ್ಶಿಯ ಪ್ಯಾಂಟ್​ ಒಳಗೆ ವಾಟರ್​ ಕ್ಯಾನ್…​! ಅಸಲಿ ವಿಷಯ ಇಲ್ಲಿದೆ ನೋಡಿ

ಫ್ಯಾಷನ್​ ಜಗತ್ತು ದಿಢೀರ್​ ಎಂದು ಬೆಳೆಯುತ್ತಿದೆ. ತಮ್ಮ ಉಡುಪುಗಳ ಪ್ರಮೋಷನ್​ಗೆ ರೂಪದರ್ಶಿಗಳ ಹುಡುಕಾಟದಲ್ಲಿ ಫ್ಯಾಷನ್​ ಡಿಸೈನರ್​ಗಳು ಇರುತ್ತಾರೆ. ಆದರೆ ಮಾಡೆಲ್​ ಪ್ರಪಂಚ ಎಂದರೆ ಅಲ್ಲಿ ತೆಳ್ಳಗೆ, ಬೆಳ್ಳಗೆ ಇರುವುದಕ್ಕಷ್ಟೇ ಪ್ರಾಮುಖ್ಯತೆ ಎನ್ನುವುದು ಸುಳ್ಳಲ್ಲ. ಅದೇ ರೀತಿ ತಮ್ಮ ಪ್ರಾಡಕ್ಟ್​ಗಳನ್ನು ಮಾರಾಟ ಮಾಡಲು ಉದ್ಯಮಿಗಳು ಏನೆಲ್ಲಾ ಗಿಮಿಕ್​ ಮಾಡುತ್ತಾರೆ ಎನ್ನುವುದಕ್ಕೆ ಈ ವೈರಲ್​ ಫೋಟೋ ಉದಾಹರಣೆಯಾಗಿದೆ.

ವೈರಲ್​ ಆಗಿರುವ ಈ ಫೋಟೋ ನೋಡಿ ಈಗ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. ಒಳಗಡೆ ಹಾಕುವ ತಮ್ಮ ಕಂಪೆನಿಯ ಬಿಗಿಯುಡುಪು ಧರಿಸಿದರೆ ಎಂಥ ದಢೂತಿಗಳೂ ತೆಳ್ಳಗೆ ಕಾಣಿಸುತ್ತಾರೆ ಎಂದು ತೋರಿಸಲು ಗಿಮಿಕ್​ ಮಾಡಲು ಹೋಗಿರುವ ಶೈನ್​ ಕಂಪೆನಿಯ ಗುಟ್ಟೀಗ ರಟ್ಟಾಗಿದೆ.

ಅಷ್ಟಕ್ಕೂ ಆಗಿರುವುದು ಏನೆಂದರೆ, ಈ ಟೈಟ್ಸ್​ಗಳ ಜಾಹೀರಾತಿಗೆ ಸ್ಲಿಮ್​ ಮಾಡೆಲ್ಲನ್ನೇ ಬಳಸಲಾಗಿದೆ. ಆದರೆ ಆಕೆ ಬಹಳ ದಪ್ಪ ಇದ್ದರೂ ಸ್ಲಿಮ್​ ಆಗಿ ಕಾಣಿಸುತ್ತಾಳೆ ಎಂದು ತೋರಿಸುವ ಸಲುವಾಗಿ, ಒಳಗಡೆ ನೀರಿನ ಕ್ಯಾನ್​ ಇಟ್ಟಿದ್ದಾರೆ! ಪ್ಯಾಂಟ್ ಪಕ್ಕ​ ವಾಟರ್​ ಕ್ಯಾನ್​ ಇಟ್ಟುಕೊಂಡು ದಪ್ಪಗಾಗುವ ಹಾಗೆ ಮಾಡಲಾಗಿದೆ. ಮೊದಲು ಹೀಗಿದ್ದಳು, ಟೈಟ್ಸ್​ ಧರಿಸಿದ ಮೇಲೆ ಸ್ಲಿಮ್​ ಆಗಿ ಕಾಣಿಸುತ್ತಾಳೆ ಎಂದು ಹೇಳುವುದು ಕಂಪೆನಿಯ ಉದ್ದೇಶವಾಗಿತ್ತು. ವೈರಲ್​ ಫೋಟೋಗೆ ನೆಟ್ಟಿಗರು ಕಂಪೆನಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...