ಫ್ಯಾಷನ್ ಜಗತ್ತು ದಿಢೀರ್ ಎಂದು ಬೆಳೆಯುತ್ತಿದೆ. ತಮ್ಮ ಉಡುಪುಗಳ ಪ್ರಮೋಷನ್ಗೆ ರೂಪದರ್ಶಿಗಳ ಹುಡುಕಾಟದಲ್ಲಿ ಫ್ಯಾಷನ್ ಡಿಸೈನರ್ಗಳು ಇರುತ್ತಾರೆ. ಆದರೆ ಮಾಡೆಲ್ ಪ್ರಪಂಚ ಎಂದರೆ ಅಲ್ಲಿ ತೆಳ್ಳಗೆ, ಬೆಳ್ಳಗೆ ಇರುವುದಕ್ಕಷ್ಟೇ ಪ್ರಾಮುಖ್ಯತೆ ಎನ್ನುವುದು ಸುಳ್ಳಲ್ಲ. ಅದೇ ರೀತಿ ತಮ್ಮ ಪ್ರಾಡಕ್ಟ್ಗಳನ್ನು ಮಾರಾಟ ಮಾಡಲು ಉದ್ಯಮಿಗಳು ಏನೆಲ್ಲಾ ಗಿಮಿಕ್ ಮಾಡುತ್ತಾರೆ ಎನ್ನುವುದಕ್ಕೆ ಈ ವೈರಲ್ ಫೋಟೋ ಉದಾಹರಣೆಯಾಗಿದೆ.
ವೈರಲ್ ಆಗಿರುವ ಈ ಫೋಟೋ ನೋಡಿ ಈಗ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. ಒಳಗಡೆ ಹಾಕುವ ತಮ್ಮ ಕಂಪೆನಿಯ ಬಿಗಿಯುಡುಪು ಧರಿಸಿದರೆ ಎಂಥ ದಢೂತಿಗಳೂ ತೆಳ್ಳಗೆ ಕಾಣಿಸುತ್ತಾರೆ ಎಂದು ತೋರಿಸಲು ಗಿಮಿಕ್ ಮಾಡಲು ಹೋಗಿರುವ ಶೈನ್ ಕಂಪೆನಿಯ ಗುಟ್ಟೀಗ ರಟ್ಟಾಗಿದೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಈ ಟೈಟ್ಸ್ಗಳ ಜಾಹೀರಾತಿಗೆ ಸ್ಲಿಮ್ ಮಾಡೆಲ್ಲನ್ನೇ ಬಳಸಲಾಗಿದೆ. ಆದರೆ ಆಕೆ ಬಹಳ ದಪ್ಪ ಇದ್ದರೂ ಸ್ಲಿಮ್ ಆಗಿ ಕಾಣಿಸುತ್ತಾಳೆ ಎಂದು ತೋರಿಸುವ ಸಲುವಾಗಿ, ಒಳಗಡೆ ನೀರಿನ ಕ್ಯಾನ್ ಇಟ್ಟಿದ್ದಾರೆ! ಪ್ಯಾಂಟ್ ಪಕ್ಕ ವಾಟರ್ ಕ್ಯಾನ್ ಇಟ್ಟುಕೊಂಡು ದಪ್ಪಗಾಗುವ ಹಾಗೆ ಮಾಡಲಾಗಿದೆ. ಮೊದಲು ಹೀಗಿದ್ದಳು, ಟೈಟ್ಸ್ ಧರಿಸಿದ ಮೇಲೆ ಸ್ಲಿಮ್ ಆಗಿ ಕಾಣಿಸುತ್ತಾಳೆ ಎಂದು ಹೇಳುವುದು ಕಂಪೆನಿಯ ಉದ್ದೇಶವಾಗಿತ್ತು. ವೈರಲ್ ಫೋಟೋಗೆ ನೆಟ್ಟಿಗರು ಕಂಪೆನಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.