alex Certify ʼಮಿಸ್ ಯೂನಿವರ್ಸ್ʼ ಹರ್ನಾಜ್ ರನ್ನು ಭೇಟಿಯಾದ ಶಶಿ ತರೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಿಸ್ ಯೂನಿವರ್ಸ್ʼ ಹರ್ನಾಜ್ ರನ್ನು ಭೇಟಿಯಾದ ಶಶಿ ತರೂರ್

2021ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿರುವ ಹರ್ನಾಜ್ ಕೌರ್ ಸಂಧು ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಭೇಟಿಯಾಗಿ ಅಭಿನಂದಿಸಿದ್ದಾರೆ.

ಶಶಿ ತರೂರ್ ಅವರು ಹರ್ನಾಜ್ ಸಂಧು ಅವರೊಂದಿಗಿನ ಭೇಟಿಯ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತವು ಹರ್ನಾಜ್ ರನ್ನು ತಾಯ್ನಾಡಿಗೆ ಸ್ವಾಗತಿಸಲು ಹೆಮ್ಮೆಪಡುತ್ತದೆ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಮಿಸ್ ಯೂನಿವರ್ಸ್ ಹರ್ನಾಜ್ ಕೌರ್ ಸಂಧು ಅವರು ಭಾರತಕ್ಕೆ ವಿಜಯಶಾಲಿಯಾಗಿ ಹಿಂದಿರುಗಿದ್ದಕ್ಕಾಗಿ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಲು ಸಂತೋಷವಾಗಿದೆ. ಅವರು ಹೊಸ ವರ್ಷದ ರಜಾದಿನಗಳಿಗಾಗಿ ಭಾರತಕ್ಕೆ ಮರಳಲು ಉತ್ಸುಕರಾಗಿದ್ದಾರೆ ಮತ್ತು ಭಾರತವು ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತದೆ. ಅವರು ನಿಜವಾಗಿಯು ನೋಡಲು ತುಂಬಾ ಆಕರ್ಷಕವಾಗಿದ್ದಾರೆ ಎಂದು ತರೂರ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇನ್ನು ಶಶಿ ತರೂರ್ ಮಾಡಿರುವ ಟ್ವೀಟ್ ಭಾರಿ ವೈರಲ್ ಆಗಿದೆ. ಹರ್ನಾಜ್ ಕೌರ್ ಸಂಧು ಅವರು ಕೂಡ ಟ್ವೀಟ್‌ಗೆ ಉತ್ತರಿಸಿದ್ದು, ತರೂರ್ ಅವರನ್ನು ಭೇಟಿಯಾಗಿರುವುದು ನಿಜಕ್ಕೂ ಗೌರವ ಎಂದು ಟ್ವೀಟ್ ಮಾಡಿದ್ದಾರೆ.

ಹರ್ನಾಜ್ ಕೌರ್ ಡಿಸೆಂಬರ್ 13ರಂದು ಇಸ್ರೇಲ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಇದೀಗ ಭಾರತಕ್ಕೆ ಮರಳಿದ್ದಾರೆ. 21 ವರ್ಷಗಳ ನಂತರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಿರೀಟ ತಂದಿರುವ ಕೀರ್ತಿ ಇವರದ್ದಾಗಿದೆ.

— Harnaaz Kaur Sandhu (@HarnaazKaur) December 15, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...