alex Certify ಇಂಗ್ಲೀಷ್​ ಭಾಷೆಯಲ್ಲಿ ಸಾಧನೆ ತೋರಿದ ಬಾಲಕನಿಗೆ ಸಂಸದ ಶಶಿ ತರೂರ್​ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೀಷ್​ ಭಾಷೆಯಲ್ಲಿ ಸಾಧನೆ ತೋರಿದ ಬಾಲಕನಿಗೆ ಸಂಸದ ಶಶಿ ತರೂರ್​ ಮೆಚ್ಚುಗೆ

ಕಾಂಗ್ರೆಸ್​ ನಾಯಕ ಹಾಗೂ ಸಂಸದ ಶಶಿ ತರೂರ್​ ತಮ್ಮಂತೆ ಇಂಗ್ಲೀಷ್​ ಭಾಷೆಯಲ್ಲಿ ಚಾಕಚಕ್ಯತೆ ತೋರಿದ ಬಾಲಕನ ಸಾಧನೆಯ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಮಲಯಾಳಿ ಬಾಲಕ ಸಾತ್ವಿಕ್​ ಚರಣ್​ 185 ಅಕ್ಷರಗಳನ್ನು ಹೊಂದಿರುವ ಇಂಗ್ಲೀಷ್​ ಶಬ್ದವನ್ನು ನೆನಪಿನಲ್ಲಿಟ್ಟುಕೊಂಡು ಹೇಳುವ ಸಾಮರ್ಥ್ಯ ಹೊಂದಿದ್ದಾನೆ.

ಟ್ವಿಟರ್​ನಲ್ಲಿ ಈ ವಿಚಾರವನ್ನು ಶೇರ್​ ಮಾಡಿರುವ ಶಶಿ ತರೂರ್, ಮತ್ತೊಬ್ಬ ಮಲಯಾಳಿ ಪ್ರತಿಭೆ, ಸೌದಿ ಅರೇಬಿಯಾದ ದಮ್ಮನ್​ ನಿವಾಸಿಯಾಗಿರುವ ಈ ಬಾಲಕ 185 ಅಕ್ಷರದ ಇಂಗ್ಲೀಷ್​ ಶಬ್ದವನ್ನು ಪಠಿಸುತ್ತಾನೆ ಎಂದು ಶೀರ್ಷಿಕೆ ನೀಡಿದ್ದಾರೆ.

ಮಲಯಾಳಿ ನ್ಯೂಸ್​ ಚಾನೆಲ್​​ ಸಾತ್ವಿಕ್​​ರ ಈ ಸಾಧನೆಯ ಬಗ್ಗೆ ವರದಿ ಮಾಡಿತ್ತು. ಈ ವಿಡಿಯೋದಲ್ಲಿ ಸಾತ್ವಿಕ್​ ಒಂದು ಚೂರು ತೊದಲದೇ ತನ್ನ ಪ್ರತಿಭೆ ಪ್ರದರ್ಶಿಸಿದ್ದಾನೆ. ಶಶಿ ತರೂರ್ ಈ ವಿಡಿಯೋವನ್ನು ಶೇರ್​ ಮಾಡ್ತಿದ್ದಂತೆಯೇ ನೆಟ್ಟಿಗರು ನಿಮ್ಮ ಇಂಗ್ಲೀಷ್​ನಿಂದಲೇ ಸ್ಪೂರ್ತಿ ಪಡೆದು ಬಾಲಕ ಈ ಸಾಧನೆ ಮಾಡಿರಬಹುದು ಎಂದು ಬರೆಯುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...