ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ತಮ್ಮಂತೆ ಇಂಗ್ಲೀಷ್ ಭಾಷೆಯಲ್ಲಿ ಚಾಕಚಕ್ಯತೆ ತೋರಿದ ಬಾಲಕನ ಸಾಧನೆಯ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಮಲಯಾಳಿ ಬಾಲಕ ಸಾತ್ವಿಕ್ ಚರಣ್ 185 ಅಕ್ಷರಗಳನ್ನು ಹೊಂದಿರುವ ಇಂಗ್ಲೀಷ್ ಶಬ್ದವನ್ನು ನೆನಪಿನಲ್ಲಿಟ್ಟುಕೊಂಡು ಹೇಳುವ ಸಾಮರ್ಥ್ಯ ಹೊಂದಿದ್ದಾನೆ.
ಟ್ವಿಟರ್ನಲ್ಲಿ ಈ ವಿಚಾರವನ್ನು ಶೇರ್ ಮಾಡಿರುವ ಶಶಿ ತರೂರ್, ಮತ್ತೊಬ್ಬ ಮಲಯಾಳಿ ಪ್ರತಿಭೆ, ಸೌದಿ ಅರೇಬಿಯಾದ ದಮ್ಮನ್ ನಿವಾಸಿಯಾಗಿರುವ ಈ ಬಾಲಕ 185 ಅಕ್ಷರದ ಇಂಗ್ಲೀಷ್ ಶಬ್ದವನ್ನು ಪಠಿಸುತ್ತಾನೆ ಎಂದು ಶೀರ್ಷಿಕೆ ನೀಡಿದ್ದಾರೆ.
ಮಲಯಾಳಿ ನ್ಯೂಸ್ ಚಾನೆಲ್ ಸಾತ್ವಿಕ್ರ ಈ ಸಾಧನೆಯ ಬಗ್ಗೆ ವರದಿ ಮಾಡಿತ್ತು. ಈ ವಿಡಿಯೋದಲ್ಲಿ ಸಾತ್ವಿಕ್ ಒಂದು ಚೂರು ತೊದಲದೇ ತನ್ನ ಪ್ರತಿಭೆ ಪ್ರದರ್ಶಿಸಿದ್ದಾನೆ. ಶಶಿ ತರೂರ್ ಈ ವಿಡಿಯೋವನ್ನು ಶೇರ್ ಮಾಡ್ತಿದ್ದಂತೆಯೇ ನೆಟ್ಟಿಗರು ನಿಮ್ಮ ಇಂಗ್ಲೀಷ್ನಿಂದಲೇ ಸ್ಪೂರ್ತಿ ಪಡೆದು ಬಾಲಕ ಈ ಸಾಧನೆ ಮಾಡಿರಬಹುದು ಎಂದು ಬರೆಯುತ್ತಿದ್ದಾರೆ.