alex Certify ಸಕ್ರಿಯ ರಾಜಕಾರಣಕ್ಕೆ ಗುಡ್​ ಬೈ ಹೇಳಿದ ದಿ. ಪ್ರಣಬ್​ ಮುಖರ್ಜಿ ಪುತ್ರಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ರಿಯ ರಾಜಕಾರಣಕ್ಕೆ ಗುಡ್​ ಬೈ ಹೇಳಿದ ದಿ. ಪ್ರಣಬ್​ ಮುಖರ್ಜಿ ಪುತ್ರಿ…..!

ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್​ ಮುಖರ್ಜಿ ಪುತ್ರಿ ಶರ್ಮಿಷ್ಠಾ ಮುಖರ್ಜಿ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಮುಖರ್ಜಿ ಕುಟುಂಬದಿಂದ ಕಾಂಗ್ರೆಸ್​ ತೊರೆದ ಕೊನೆಯ ನಾಯಕಿ ಎನಿಸಿಕೊಂಡಿದ್ದಾರೆ.

ಟ್ವಿಟರ್​ ಮೂಲಕ ಶರ್ಮಿಷ್ಠಾ ರಾಜಕೀಯ ಜೀವನದಿಂದ ನಿವೃತ್ತಿ ಘೋಷಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ತಾವು ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯರಾಗಿ ಉಳಿಯುತ್ತೇನೆ ಎಂದು ಹೇಳಿದ್ದಾರೆ.

ಎಲ್ಲರಿಗೂ ಧನ್ಯವಾದಗಳು. ಆದರೆ ಇನ್ಮುಂದೆ ನಾನು ರಾಜಕಾರಣಿಯಲ್ಲ. ನಾನು ರಾಜಕಾರಣಕ್ಕೆ ವಿದಾಯ ಘೋಷಿಸಿದ್ದೇನೆ. ಆದರೆ ನಾನು ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯೆಯಾಗಿ ಮುಂದುವರಿಯುತ್ತೇನೆ. ಆದರೆ ರಾಜಕಾರಣದಲ್ಲಿ ಸಕ್ರಿಯವಾಗಿ ಇರುವುದಿಲ್ಲ. ದೇಶ ಸೇವೆ ಮಾಡಲು ಸಾಕಷ್ಟು ಮಾರ್ಗಗಳಿವೆ ಎಂದು ಟ್ವೀಟಾಯಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿರುವ ಶರ್ಮಿಷ್ಠಾ ತಾವು ರಾಜಕಾರಣಕ್ಕೆ ಸೂಕ್ತವಾದವರಲ್ಲ ಎನಿಸತೊಡಗಿತು. ನಾನು ಯಾವುದನ್ನು ಜಾಸ್ತಿ ಪ್ರೀತಿಸುತ್ತೇನೋ ಆ ಕಡೆಗಳಲ್ಲಿ ಸಮಯ ಕಳೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಬೇರೆ ಯಾವುದೇ ರಾಜಕೀಯ ಪಕ್ಷ ಸೇರ್ಪಡೆಯನ್ನು ನಿರಾಕರಿಸಿದ್ದಾರೆ.

ಈ ವರ್ಷದ ಜುಲೈ ತಿಂಗಳಲ್ಲಿ ಶರ್ಮಿಷ್ಠಾರ ಸಹೋದರ ಹಾಗೂ ಪ್ರಣಬ್​ ಮುಖರ್ಜಿ ಪುತ್ರ ಅಭಿಜಿತ್​ ಮುಖರ್ಜಿ ಕಾಂಗ್ರೆಸ್​ ತೊರೆದು ತೃಣಮೂಲ ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಸಹೋದರನ ಈ ನಡೆಗೆ ಟ್ವಿಟರ್​ನಲ್ಲಿ ಶರ್ಮಿಷ್ಠಾ ಬೇಸರ ವ್ಯಕ್ತಪಡಿಸಿದ್ದರು.

ಇದಾದ ಬಳಿಕ ಆಗಸ್ಟ್​ ತಿಂಗಳಲ್ಲಿ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್​ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಣಬ್​ ಮುಖರ್ಜಿ ಅತ್ತಿಗೆ ಸುವ್ರ ಘೋಷ್​​ ಟಿಎಂಸಿ ಸೇರ್ಪಡೆಯಾಗಿದ್ದರು.

2014ರಲ್ಲಿ ಕಾಂಗ್ರೆಸ್​​ ಸೇರ್ಪಡೆಯಾದ ಬಳಿಕ ಶರ್ಮಿಷ್ಠಾ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್​ಆದ್ಮಿ ಪಕ್ಷದ ಅಭ್ಯರ್ಥಿ ಸೌರಭ್​ ಭಾರದ್ವಾಜ್​​ ಎದುರು ಸೋತಿದ್ದರು.

2019ರ ಸೆಪ್ಟೆಂಬರ್​ನಲ್ಲಿ ಶರ್ಮಿಷ್ಠಾರನ್ನು ಕಾಂಗ್ರೆಸ್​ ವಕ್ತಾರೆಯನ್ನಾಗಿ ನೇಮಿಸಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...