alex Certify ಕುತೂಹಲಕ್ಕೆ ಕಾರಣವಾಗಿದೆ ಭಾರತ್‌ ಪೇ ಸಂಸ್ಥಾಪಕನೊಂದಿಗಿನ ವಿರಾಟ್​ ಕೊಹ್ಲಿ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಭಾರತ್‌ ಪೇ ಸಂಸ್ಥಾಪಕನೊಂದಿಗಿನ ವಿರಾಟ್​ ಕೊಹ್ಲಿ ಭೇಟಿ

ಭಾರತ್​ಪೇ ಸಹ-ಸಂಸ್ಥಾಪಕ ಅಶ್ನೀರ್​ ಗ್ರೋವರ್​ ಅವರು ಭಾರತದ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರೊಂದಿಗಿನ ಚಿತ್ರವನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಗ್ರೋವರ್​ ಅವರು ಕೊಹ್ಲಿ ನಡುವಿನ ವ್ಯವಹಾರದಲ್ಲಿ ಕೆಲವು ಸಹಯೋಗದ ಬಗ್ಗೆ ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಬೆನ್​ ಸ್ಟೋಕ್ಸ್​ ಬಗ್ಗೆ ಸಾಮಾನ್ಯ ಉತ್ಸಾಹ ಹೊಂದಿರುವ ಈ ದೆಹಲಿ ಹುಡುಗರು ಏನು ಚಚಿರ್ಸುತ್ತಿರಬಹುದು ? ನಾಗ್ಪುರದಲ್ಲಿ ನಡೆವ ಪಂದ್ಯಕ್ಕಾಗಿ ಕೊಹ್ಲಿಯವರಿಗೆ ಅವರಿಗೆ ಶುಭವಾಗಲಿ ! ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

ಅವರ ಟ್ವೀಟ್​ಗೆ 28 ಸಾವಿರ ಲೈಕ್​ ಮತ್ತು ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ. ಇವರಿಬ್ಬರು ಏನು ಚರ್ಚಿಸುತ್ತಿದ್ದಾರೆ ಎಂಬ ಕುತೂಹಲದ ಪ್ರಶ್ನೆಗಳನ್ನು ನೆಟ್ಟಿಗರು ಹಾಕಿದ್ದಾರೆ.

ಗ್ರೋವರ್​ ಮತ್ತು ಕೊಹ್ಲಿ ಬಹುಶಃ ಪಾರ್ಟಿಯಲ್ಲಿ ಭೇಟಿಯಾದ ಚಿತ್ರದ ಹಿನ್ನೆಲೆಯಿಂದ ಅನೇಕರು ಊಹಿಸಿದರೆ, ಇಬ್ಬರೂ ಕೆಲವು ವ್ಯವಹಾರ ಯೋಜನೆಯನ್ನು ಚರ್ಚಿಸಿದ್ದಾರೆ ಎಂಬುದು ಅನೇಕರ ವಾದವಾಗಿತ್ತು.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್​ ಕೊಹ್ಲಿಯ ಆಘಾತಕಾರಿ ಸನ್ನಿವೇಶದ ಚಿತ್ರವನ್ನು ನೆಟ್ಟಿಗರು ಮೆಮೆ ಟೆಂಪ್ಲೇಟ್​ ಆಗಿ ಮಾಡಿದ್ದಾರೆ.

ಮೊಹಾಲಿಯಲ್ಲಿ ನಡೆದ ಪಂದ್ಯದ ವೇಳೆ ಉಮೇಶ್​ ಯಾದವ್​ ಅವರ ಎಸೆತಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಕ್ಯಾಮರೂನ್​ ಗ್ರೀನ್​ ಬ್ಯಾಕ್​ ಟು ಬ್ಯಾಕ್​ ಬೌಂಡರಿಗಳನ್ನು ಹೊಡೆದ ನಂತರ ಕೊಹ್ಲಿ ಆಘಾತಕ್ಕೊಳಗಾದ ಮುಖಚಹರೆ ವ್ಯಕ್ತಮಾಡಿದ್ದರು.

ನಾಗ್ಪುರದಲ್ಲಿ ನಡೆಯಲಿರುವ ಟಿ20 ಸರಣಿಯ ಎರಡನೇ ಪಂದ್ಯಕ್ಕಾಗಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...