ಭಾರತ್ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ಚಿತ್ರವನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.
ಗ್ರೋವರ್ ಅವರು ಕೊಹ್ಲಿ ನಡುವಿನ ವ್ಯವಹಾರದಲ್ಲಿ ಕೆಲವು ಸಹಯೋಗದ ಬಗ್ಗೆ ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ.
ಬೆನ್ ಸ್ಟೋಕ್ಸ್ ಬಗ್ಗೆ ಸಾಮಾನ್ಯ ಉತ್ಸಾಹ ಹೊಂದಿರುವ ಈ ದೆಹಲಿ ಹುಡುಗರು ಏನು ಚಚಿರ್ಸುತ್ತಿರಬಹುದು ? ನಾಗ್ಪುರದಲ್ಲಿ ನಡೆವ ಪಂದ್ಯಕ್ಕಾಗಿ ಕೊಹ್ಲಿಯವರಿಗೆ ಅವರಿಗೆ ಶುಭವಾಗಲಿ ! ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅವರ ಟ್ವೀಟ್ಗೆ 28 ಸಾವಿರ ಲೈಕ್ ಮತ್ತು ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ. ಇವರಿಬ್ಬರು ಏನು ಚರ್ಚಿಸುತ್ತಿದ್ದಾರೆ ಎಂಬ ಕುತೂಹಲದ ಪ್ರಶ್ನೆಗಳನ್ನು ನೆಟ್ಟಿಗರು ಹಾಕಿದ್ದಾರೆ.
ಗ್ರೋವರ್ ಮತ್ತು ಕೊಹ್ಲಿ ಬಹುಶಃ ಪಾರ್ಟಿಯಲ್ಲಿ ಭೇಟಿಯಾದ ಚಿತ್ರದ ಹಿನ್ನೆಲೆಯಿಂದ ಅನೇಕರು ಊಹಿಸಿದರೆ, ಇಬ್ಬರೂ ಕೆಲವು ವ್ಯವಹಾರ ಯೋಜನೆಯನ್ನು ಚರ್ಚಿಸಿದ್ದಾರೆ ಎಂಬುದು ಅನೇಕರ ವಾದವಾಗಿತ್ತು.
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಆಘಾತಕಾರಿ ಸನ್ನಿವೇಶದ ಚಿತ್ರವನ್ನು ನೆಟ್ಟಿಗರು ಮೆಮೆ ಟೆಂಪ್ಲೇಟ್ ಆಗಿ ಮಾಡಿದ್ದಾರೆ.
ಮೊಹಾಲಿಯಲ್ಲಿ ನಡೆದ ಪಂದ್ಯದ ವೇಳೆ ಉಮೇಶ್ ಯಾದವ್ ಅವರ ಎಸೆತಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಕ್ಯಾಮರೂನ್ ಗ್ರೀನ್ ಬ್ಯಾಕ್ ಟು ಬ್ಯಾಕ್ ಬೌಂಡರಿಗಳನ್ನು ಹೊಡೆದ ನಂತರ ಕೊಹ್ಲಿ ಆಘಾತಕ್ಕೊಳಗಾದ ಮುಖಚಹರೆ ವ್ಯಕ್ತಮಾಡಿದ್ದರು.
ನಾಗ್ಪುರದಲ್ಲಿ ನಡೆಯಲಿರುವ ಟಿ20 ಸರಣಿಯ ಎರಡನೇ ಪಂದ್ಯಕ್ಕಾಗಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ.