ಪುಣೆ: ಪ್ರಧಾನಿ ಮೋದಿಯವರ ವಿಶಿಷ್ಟ ಗುಣವೇ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗಿಂತ ವಿಭಿನ್ನವಾಗಿರುತ್ತದೆ ಎಂದು ಎನ್.ಸಿ.ಪಿ. ನಾಯಕ ಶರದ್ ಪವಾರ್ ಹೇಳಿದ್ದಾರೆ.
ಮರಾಠಿ ದೈನಿಕವೊಂದಕ್ಕೆ ಸಂದರ್ಶನ ನೀಡಿರುವ ಪ್ರಧಾನಿ ಮೋದಿಯವರ ಕಾರ್ಯಶೈಲಿಯನ್ನು ಹಾಡಿಹೊಗಳಿದ್ದಾರೆ. ಯಾವುದೇ ಕೆಲಸವನ್ನು ಮೋದಿ ಕೈಗೆತ್ತಿಕೊಂಡರೆ ಪೂರ್ಣಗೊಳಿಸುವವರೆಗೆ ಬಿಡುವುದಿಲ್ಲ. ಎಷ್ಟೇ ಅಡ್ಡಿಯಾದರೂ ಸರಿಯೇ ಮೋದಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಆಡಳಿತದ ಮೇಲೆ ಬಿಗಿ ಹಿಡಿತವಿರುವ ಅವರದು ವಿಶಿಷ್ಟ ಗುಣ ಸ್ವಭಾವ ಎಂದು ಹೇಳಿದ್ದಾರೆ.
ಸಂಪುಟ ಸಹೋದ್ಯೋಗಿಗಳು, ಸಚಿವಾಲಯ ಹಾಗೂ ಅಧಿಕಾರಿಗಳು ಒಟ್ಟಾಗಿ ಪರಿಣಾಮಕಾರಿಯಾಗಿ ಸರ್ಕಾರದ ನೀತಿ ನಿಯಮಗಳನ್ನು ಜಾರಿ ಮಾಡಲು ಅಗತ್ಯವಾದ ರೂಪುರೇಷೆಗಳನ್ನು ಪ್ರಧಾನಿ ನೀಡುತ್ತಾರೆ. ಎಲ್ಲರ ಮೇಲೆಯೂ ನಿಗಾವಹಿಸಿ ಯೋಜನೆಯ ಜಾರಿ ಯಶಸ್ವಿಯಾಗಿಸುತ್ತಾರೆ. ಅವರ ಈ ಕಾರ್ಯಶೈಲಿ ವಿಶಿಷ್ಟವಾಗಿದೆ. ಇಂತಹ ಶೈಲಿ ಮನಮೋಹನ್ ಸಿಂಗ್ ಅವರಲ್ಲಿ ಇರಲಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.