alex Certify ಹಿರಿಯ ನಟ ಶಂಕರ್​ ರಾವ್​ ವಿಧಿವಶ; ಕಂಬನಿ ಮಿಡಿದ ಚಂದನವನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಟ ಶಂಕರ್​ ರಾವ್​ ವಿಧಿವಶ; ಕಂಬನಿ ಮಿಡಿದ ಚಂದನವನ

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ಶಂಕರ್​ ರಾವ್​ ಇಹಲೋಕ ತ್ಯಜಿಸಿದ್ದಾರೆ. ಇಂದು ಬೆಳಗ್ಗೆ 6:30ರ ಸುಮಾರಿಗೆ ಅರಕೆರೆಯ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ.

ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದ ಶಂಕರ್​ ರಾವ್​ಗೆ 84 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್​ ರಾವ್​ ಇಂದು ಬೆಳಗ್ಗೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕೆಲ ಸಿನಿಮಾಗಳಲ್ಲೂ ನಟಿಸಿದ್ದ ಶಂಕರ್​ ರಾವ್,​ ʼಪಾಪಾ ಪಾಂಡುʼ ಧಾರವಾಹಿಯ ಮೂಲಕ ಮನೆ ಮಾತಾಗಿದ್ದರು. ಹಿರಿಯ ನಟನ ನಿಧನಕ್ಕೆ ಚಂದನವನದ ನಟರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಶಂಕರ್​ ರಾವ್​ ಅಂತ್ಯಕ್ರಿಯೆ ನೆರವೇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...