alex Certify ಶೇನ್ ವಾರ್ನ್ ಸಾವಿನ ಕೊನೆಕ್ಷಣದ ಘಟನಾವಳಿಗಳನ್ನು ಬಿಚ್ಚಿಟ್ಟ ಥಾಯ್‌ ಪೊಲೀಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇನ್ ವಾರ್ನ್ ಸಾವಿನ ಕೊನೆಕ್ಷಣದ ಘಟನಾವಳಿಗಳನ್ನು ಬಿಚ್ಚಿಟ್ಟ ಥಾಯ್‌ ಪೊಲೀಸ್…!

ಕ್ರಿಕೆಟ್ ಲೋಕದ ದಂತಕತೆ, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್ ಶೇನ್ ವಾರ್ನ್, ಭೌತಿಕ ಲೋಕದಲ್ಲಿ ಬದುಕಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದು ಅಸಾಧ್ಯ. ಕ್ರಿಕೆಟ್ ಲೋಕದಲ್ಲಿ ಸಕ್ರಿಯವಾಗಿದ್ದ ಶೇನ್ ಅವರ ಅಕಾಲಿಕ ಮರಣ ಎಲ್ಲರ ಹೃದಯವನ್ನು ಭಾರವಾಗಿಸಿದೆ. ಈ ಸಮಯದಲ್ಲಿ ಶೇನ್ ಅವರ ಕೊನೆ ಕ್ಷಣಗಳು ಹೇಗಿದ್ದವು ಎಂಬುದರ ಜೊತೆಗೆ, ಅವರ ಸಾವಿನ ಬಗ್ಗೆ ಥಾಯ್ಲೆಂಡ್ ಪೊಲೀಸರು ಹಲವು ವಿಚಾರಗಳನ್ನು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ವೇಳೆಗೆ ಶೇನ್ ವಾರ್ನ್ ಇನ್ನಿಲ್ಲ ಎಂಬ ಸುದ್ದಿ ಇಡೀ ಜಗತ್ತನ್ನ ಒಂದು ಕ್ಷಣ ಮೌನವಾಗಿಸಿದ್ದು ನಿಜ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಆ ಕ್ಷಣದಲ್ಲಿ ಅವರೊಂದಿಗಿದ್ದ ಸ್ನೇಹಿತರು ಶೇನ್ ಅವರನ್ನು ಬದುಕಿಸಲು ಶತಾಯಗತಾಯ ಪ್ರಯತ್ನ ನಡೆಸಿದ್ದರು ಎಂದು ಥಾಯ್ಲೆಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ‌.

ಶೇನ್ ವಾರ್ನ್ ಹಾಗೂ ಅವರ ಮೂವರು ಸ್ನೇಹಿತರು, ಕೊಹ್ ಸಮುಯಿನ ಖಾಸಗಿ ವಿಲ್ಲಾ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಸಂಜೆಯಾದರು ಶೇನ್ ಅವರು ಊಟಕ್ಕೆ ಬಾರದ ಕಾರಣ, ಅವರ ಸ್ನೇಹಿತರೊಬ್ಬರು ಶೇನ್ ತಂಗಿದ್ದ ಕೋಣೆಗೆ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಶೇನ್ ಪ್ರಜ್ಞಾಹೀನವಾಗಿ ಪತ್ತೆಯಾಗಿದ್ದರು.

WAR BREAKING: ಉಕ್ರೇನ್ ಮನವಿ ತಿರಸ್ಕರಿಸಿದ ನ್ಯಾಟೋ; ಉಕ್ರೇನ್ ಪತನವಾದರೆ ಇಡೀ ಯುರೋಪ್ ಪತನವಾಗತ್ತೆ; ಎಚ್ಚರಿಕೆ ನೀಡಿದ ಝೆಲೆನ್ಸ್ಕಿ

ಪ್ರಜ್ಞಾಹೀನವಾಗಿ ಪತ್ತೆಯಾಗಿದ್ದ ವಾರ್ನ್ ಅವರ ಪ್ರಾಣ ಉಳಿಸಲು ಸಿಪಿಆರ್ ಸೇರಿದಂತೆ ಹಲವಾರು ಪ್ರಯತ್ನಗಳನ್ನು ಸ್ನೇಹಿತರು ಮಾಡಿದ್ದರು. ನಂತರ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಕೂಡ ಶೇನ್ ವಾರ್ನ್ ಅವರನ್ನು ಬದುಕಿಸುವ ಪ್ರಯತ್ನ ನಡೆಸಿದರು. 10-20 ನಿಮಿಷಗಳ ಕಾಲ ಸಿಪಿಆರ್ ನಡೆಸಿದ್ರು ಆದ್ರೆ ಪ್ರಯೋಜನವಾಗಲಿಲ್ಲ.

ತಕ್ಷಣ ಥೈ ಅಂತರಾಷ್ಟ್ರೀಯ ಆಸ್ಪತ್ರೆಯ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿತು, ಶೇನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಯೂ ಐದು ನಿಮಿಷಗಳ ಕಾಲ ಸಿಪಿಆರ್ ನಡೆಸಲಾಯಿತು ಆದರೆ ಅಷ್ಟೊತ್ತಿಗಾಗಲೇ ಶೇನ್ ಸಾವನ್ನಪ್ಪಿದರು. ಅವರ ಸ್ನೇಹಿತರು ಶೇನ್ ಅವರನ್ನು ಬದುಕಿಸಲು ಸಾಕಷ್ಟು ಪ್ರಯತ್ನ ಪಟ್ಟರು ಎಂದು, ಸ್ಥಳೀಯ ಪೊಲೀಸ್ ಅಧಿಕಾರಿ ಚಾಚವಾನ್ ರಾಯ್ಟರ್ಸ್‌ಗೆ ಮಾಹಿತಿ ನೀಡಿದ್ದಾರೆ.

ಶೇನ್ ವಾರ್ನ್ ಅವರ ಮೃತದೇಹವನ್ನು ಶವಪರೀಕ್ಷೆಗಾಗಿ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಶನಿವಾರ ಶೇನ್ ವಾರ್ನ್ ಅವರ ಸ್ನೇಹಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಥಾಯ್ಲೆಂಡ್ನ ವಿಧೇಶಿ ವ್ಯವಹಾರಗಳ ಸಚಿವೆ ಮರೀಸ್ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...