alex Certify SHOCKING: ನಾಯಿಯನ್ನು ಹೊಡೆದು ಸಾಯಿಸಿ ಕ್ಯಾಂಪಸ್‌ ನಲ್ಲಿ ಎಳೆದಾಡಿದ ವಿದ್ಯಾರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ನಾಯಿಯನ್ನು ಹೊಡೆದು ಸಾಯಿಸಿ ಕ್ಯಾಂಪಸ್‌ ನಲ್ಲಿ ಎಳೆದಾಡಿದ ವಿದ್ಯಾರ್ಥಿಗಳು

ದೆಹಲಿಯಲ್ಲಿ ಗುಂಪೊಂದು ಗರ್ಭಿಣಿ ಬೀದಿ ನಾಯಿಯನ್ನು ಥಳಿಸಿ ಕೊಂದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವು ಮಂದಿ ನಾಯಿಯನ್ನು ಅಟ್ಟಾಡಿಸಿ ಕೋಲುಗಳಿಂದ ಹೊಡೆದಿದ್ದು, ನಾಯಿ ನೋವಿನಿಂದ ಬಳಲಿ ಜೀವ ಬಿಟ್ಟಿದೆ. ಪಾರ್ಕ್‌ನಲ್ಲಿ ನಡೆದ ಈ ಭೀಕರ ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿದ್ದಾರೆ.

ನಾಯಿಯನ್ನು ಸಾಯಿಸಿದವರು ಆಗ್ನೇಯ ದೆಹಲಿಯ ಡಾನ್ ಬಾಸ್ಕೋ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನವರು ಎಂದು ಗುರುತಿಸಲಾಗಿದೆ. ಅದೇ ವ್ಯಕ್ತಿಗಳು ಕಾಲೇಜು ಕ್ಯಾಂಪಸ್‌ನಾದ್ಯಂತ ನಾಯಿ ದೇಹವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು.

ಗಾಜಿಯಾಬಾದ್‌‌ನಲ್ಲಿ ಇಂತಹದ್ದೇ ಘಟನೆಯಲ್ಲಿ ಮೂವರು ನಾಯಿಯನ್ನು ನೇತುಹಾಕಿ ಹೊಡೆದು ಸಾಯಿಸುತ್ತಿರುವುದನ್ನು ತೋರಿಸುವ ವಿಡಿಯೋ ಕಂಡುಬಂದಿದೆ. ಈ ಸಂಬಂಧ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...