ಬೆಂಗಳೂರು: ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಆರಂಭಿಸಿದ ಶಕ್ತಿ ಯೋಜನೆಯಡಿ ಕಳೆದ ಮೂರು ದಿನಗಳಲ್ಲಿ 98 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.
ಮೂರು ದಿನದ ಪ್ರಯಾಣದ ಮೊತ್ತ 21 ಕೋಟಿ ರೂ, ಆಗಿದೆ. ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಮೂರು ದಿನದ ಅವಧಿಯಲ್ಲಿ 98.58 ಲಕ್ಷ ಮಹಿಳೆಯರು ನಾಲ್ಕು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಯೋಜನೆ ಆರಂಭವಾದ ಮೊದಲ ದಿನ 5.71 ಲಕ್ಷ ಮಹಿಳಾ ಪ್ರಯಾಣಿಕರು ರಾಜ್ಯ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸಿದ್ದರು. ಸೋಮವಾರ 41.34 ಲಕ್ಷ, ಮಂಗಳವಾರ 51.52 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 98.58 ಲಕ್ಷ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು, ಮೊದಲ ದಿನ 1.40 ಕೋಟಿ ರೂ., ಎರಡನೇ ದಿನ 8.83 ಕೋಟಿ ರೂ., ಮೂರನೇ ದಿನ 10.82 ಕೋಟಿ ರೂ. ಮೊತ್ತ ಆಗಿದೆ. ಮೊದಲ ಎರಡು ದಿನಕ್ಕಿಂತ ಮಂಗಳವಾರ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪ್ರಯಾಣಿಸಿದ್ದಾರೆ.