ಬ್ಯುಸಿ ಲೈಫ್ನ್ನಿಂದ ಕೊಂಚ ಬ್ರೇಕ್ ಸಿಕ್ಕರೆ ಸಾಕು, ಗೆಳೆಯರೊಂದಿಗೆ ಟ್ರಿಪ್ ಪ್ಲಾನ್ ಮಾಡಿ, ಮೋಜು ಮಸ್ತಿ ಮಾಡೊದೇನೇ ಒಂದು ಖುಷಿ. ಈಗ ಬಾಲಿವುಡ್ನ ನಟ ಶಾಹಿದ್ ಕಪೂರ್ ಕೂಡಾ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ತಮ್ಮ ಸಹೋದರ ಈಶಾನ್ ಖಟ್ಟರ್ ಹಾಗೂ ಗೆಳೆಯ ನಟ ಕುನಾಲ್ ಖೆಮೂ ಜೊತೆಗೆ ಯುರೋಪ್ ಸುತ್ತಾತ್ತಿದ್ದಾರೆ. ಅದು ಕೂಡಾ ಬೈಕ್ನಲ್ಲಿ.
ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟರಾದ ಶಾಹಿದ್ ಕಪೂರ್, ಈಶಾನ್ ಖಟ್ಟರ್ ಹಾಗೂ ಕುನಾಲ್ ಖೆಮೂ, ಮೂವರೂ ಯುರೋಪ್ನ ಗಲ್ಲಿ ಗಲ್ಲಿಗಳನ್ನ ಬೈಕ್ನಲ್ಲಿ ಸುತ್ತು ಹಾಕ್ತಿದ್ದಾರೆ. ಅವರು ಎಂಜಾಯ್ ಮಾಡಿದ್ದ ಒಂದೊಂದು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಅದೇ ಯುರೋಪಿಯನ್ ಟೂರ್ನ ವಿಡಿಯೋ ಒಂದು ಸಖತ್ ಫನ್ನಿಯಾಗಿದೆ. ಕುನಾಲ್ ಖೆಮೂ, ಶಾಹಿದ್ ಕಪೂರ್ ಹಾಗೂ ಈಶಾನ್ ಖಟ್ಟರ್ ಮೂವರೂ ಯುರೋಪ್ನ ಒಂದು ಇಕ್ಕಟ್ಟಾದ ಗಲ್ಲಿಯಲ್ಲಿ ಗೋಡೆಯೊಂದನ್ನ ಹತ್ತಿ, ಫೋಟೋಗೆ ಫನ್ನಿಯಾಗಿ ಪೋಸ್ ಕೊಡ್ತಾ ಇದ್ದರು. ಈಶಾನ್ ಖಟ್ಟರ್ ಹಾಗೂ ಶಾಹಿದ್ ಕಪೂರ್ ಏನೋ, ಹಾಗೋ ಹೀಗೋ ಕಸರತ್ತು ಮಾಡ್ಕೊಂಡು ಪೋಸ್ಗೆ ರೆಡಿಯಾದ್ರು.
ಆದರೆ ಕುನಾಲ್ ಖೇಮೂ ಗೋಡೆ ಏರಿ ಪೋಸ್ ಕೊಡೊಕೆ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಜಾರಿದರು. ಆಗ ಶಾಹಿದ್ ಕುನಾಲ್ಗೆ ರೇಗಿಸೋಕೆ ಜೋರಾಗಿ ನಕ್ಕಿದ್ದಾರೆ. ಆ ಸದ್ದಿಗೆ ಅಲ್ಲೇ ಪಕ್ಕದ ಆಂಟಿ ಕಿಟಕಿ ಬಾಗಿಲು ತೆಗೆದು ನೋಡಿದ್ದಾರೆ. ಅವರ ಕಣ್ಣಿಗೆ ಕಾಣಿಸಿದ್ದು ಶಾಹಿದ್ ಕಪೂರ್.
ತಮ್ಮ ಕೀಟಲೆಯಿಂದ ಅವರಿಗೆ ತೊಂದರೆಯಾಗುತ್ತಿದೆ ಅಂತ ಗೊತ್ತಾದ ತಕ್ಷಣ ಶಾಹಿದ್ ಸಾರಿ ಅಂಟಿ ಅಂತ ಕೇಳಿದ್ದಾರೆ. ಹಾಗಂತ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳೊದು ಮಾತ್ರ ಮರೆಯಲಿಲ್ಲ.