alex Certify ಶಬರಿಮಲೆ ಪಾದಯಾತ್ರೆ ವೇಳೆ ದುರಂತ; ಬೆಟ್ಟ ಹತ್ತುವಾಗ ಕುಸಿದುಬಿದ್ದು ಬಾಲಕಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬರಿಮಲೆ ಪಾದಯಾತ್ರೆ ವೇಳೆ ದುರಂತ; ಬೆಟ್ಟ ಹತ್ತುವಾಗ ಕುಸಿದುಬಿದ್ದು ಬಾಲಕಿ ದುರ್ಮರಣ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ತಮಿಳುನಾಡು ಮೂಲದ 12 ವರ್ಷದ ಪದ್ಮಶ್ರೀ ಮೃತ ಬಾಲಕಿ. ಪಾದಯಾತ್ರೆ ಮೂಲಕ ದೇಗುಲಕ್ಕೆ ಹೋಗುತ್ತಿದ್ದಾಗ ಅಪ್ಪಾಚಿಮೇಡು ಎಂಬಲ್ಲಿ ಬಾಲಕಿ ಕುಸಿದು ಬಿದ್ದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆಯನ್ನು ಸ್ಥಳೀಯ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಬಾಲಕಿಗೆ ಮೊದಲೇ ಹೃದ್ರೋಗ ಸಮಸ್ಯೆ ಇತ್ತು. ಚಿಕಿತ್ಸೆ ಪಡೆಯುತ್ತಲೇ ಶಬರಿಮಲೆ ಬೆಟ್ಟ ಏರಲು ಮುಂದಾಗಿದ್ದಳು ಎಂದು ತಿಳಿದುಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...