alex Certify ಟ್ರಂಪ್‌ ಜೊತೆಗಿನ ಸಂಬಂಧದ ಕುರಿತು ಮೊದಲ ಬಾರಿಗೆ ಬಾಯ್ಬಿಟ್ಟ ನೀಲಿ ತಾರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್‌ ಜೊತೆಗಿನ ಸಂಬಂಧದ ಕುರಿತು ಮೊದಲ ಬಾರಿಗೆ ಬಾಯ್ಬಿಟ್ಟ ನೀಲಿ ತಾರೆ

ಪೋರ್ನ್ಸ್ಟಾ ರ್ ಸ್ಟಾರ್ಮಿ ಡೇನಿಯಲ್ಸ್ ಸುಮಾರು 15 ವರ್ಷಗಳ ನಂತ್ರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ಟ್ರಂಪ್ ಜೊತೆಗಿನ ಲೈಂಗಿಕ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಟ್ರಂಪ್ ಜೊತೆಗಿನ 90 ಸೆಕೆಂಡಿನ ಲೈಂಗಿಕ ಸಂಬಂಧದ ಸಮಯ ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣವಾಗಿತ್ತೆಂದು ಸ್ಟಾರ್ಮಿ ಡೇನಿಯಲ್ಸ್ ಹೇಳಿದ್ದಾರೆ.

ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಡೊನಾಲ್ಡ್ ಟ್ರಂಪ್ ಮಾಜಿ ವಕೀಲ ಮೈಕೆಲ್ ಕೋಹೆನ್. Mea Culpa ಹೊಸ ಸಂಚಿಕೆಗಾಗಿ ಸ್ಟಾರ್ಮಿ ಡೇನಿಯಲ್ಸ್ ಸಂದರ್ಶಿಸಿದರು. ಇದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಸಂಬಂಧದ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ.

2006 ರ ಲೈಂಗಿಕ ಕ್ಷಣವನ್ನು ನೆನಪಿಸಿಕೊಂಡ ಸ್ಟಾರ್ಮಿ ಡೇನಿಯಲ್ಸ್ ಆ ಇಡೀ ಘಟನೆಯನ್ನು ನಾನು ದ್ವೇಷಿಸುತ್ತೇನೆ ಎಂದಿದ್ದಾರೆ. ಆ ನಿರ್ದಿಷ್ಟ ದಿನದ ಘಟನೆಗಳ ಬಗ್ಗೆ ಮಾತನಾಡುತ್ತಾ, ಡೊನಾಲ್ಡ್ ಟ್ರಂಪ್ ಹೋಟೆಲ್ ಹಾಸಿಗೆಯ ಮೇಲೆ ಅರೆ ಬೆತ್ತಲಾಗಿ ನನಗಾಗಿ ಕಾಯ್ತಿದ್ದರು ಎಂದು ಡೇನಿಯಲ್ಸ್ ಹೇಳಿದ್ದಾರೆ. ಸ್ಟಾರ್ಮಿ ಡೇನಿಯಲ್ಸ್ ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್. ಅವರ ಹೆಸರು 2018 ರಲ್ಲಿ ಬೆಳಕಿಗೆ ಬಂದಿತ್ತು. ಟ್ರಂಪ್, 2016ರ ಚುನಾವಣೆ ವೇಳೆ ಸುಮ್ಮನಿರಲು ಸ್ಟಾರ್ಮಿಗೆ 130,000 ಡಾಲರ್ ನೀಡಿದ್ದರು ಎಂಬ ಸುದ್ದಿಯಾಗಿತ್ತು. ಇದೇ ವಿಷ್ಯಕ್ಕೆ ಡೇನಿಯಲ್ಸ್ ಜೈಲಿಗೆ ಹೋಗಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...