
ಇಡೀ ಜೀವನ ಒಡಹುಟ್ಟಿದವರ ನೆನಪಲ್ಲೇ ಸಾಗಿಸಿದ ಮೊಹಮ್ಮದ್ ಸಿದ್ದಿಕಿ ತನ್ನ ಸೋದರ ಮೊಹಮ್ಮದ್ ಹಬೀಬ್ ಅಕಾ ಛೀಲಾ ಅವರನ್ನು 1947ರ ವಿಭಜನೆ ಬಳಿಕ ಮಂಗಳವಾರ ಎದುರಾದರು. ಪಾಕಿಸ್ತಾನದ ಗುರುದ್ವಾರ ಕರ್ತಾರಪುರ ಸಾಹಿಬ್, ಇಂಥ ಅಪರೂಪದ ಭೇಟಿಗೆ ಸಾಕ್ಷಿಯಾಗಿತ್ತು. ಕುಟುಂಬಸ್ಥರು, ನೆರೆದವರ ಕಣ್ಣುಗಳಲ್ಲಿ ಆನಂದಬಾಷ್ಪವಿತ್ತು. ಪರಸ್ಪರ ತಬ್ಬಿ 75 ವರ್ಷದ ಅಗಲಿಕೆ ಅಂತ್ಯಗೊಳಿಸಿದ ಸೋದರರು.
ಸೋದರರ ಪೈಕಿ ಮೊಹಮ್ಮದ್ ಸಿದ್ದಿಕಿ ಪಾಕಿಸ್ತಾನದ ಫೈಸ್ಲಾಬಾದ್ ನಿವಾಸಿ, ಮೊಹಮ್ಮದ್ ಹಬೀಬ್ ಅವರು ಭಾರತದ ಪಂಜಾಬ್ ನಿವಾಸಿ. ಸಾಮಾಜಿಕ ಜಾಲತಾಣದಲ್ಲಿ ಕುಟುಂಬಸ್ಥರ ಪರಿಚಯವಾಗಿ, ಅವರೇ ಇಬ್ಬರು ಸೋದರರ ಅಪೂರ್ವ ಮಿಲನಕ್ಕೆ ವ್ಯವಸ್ಥೆ ಮಾಡಿದ್ದರು. ಹಬೀಬ್ ಅವರು ಇಷ್ಟು ವರ್ಷಗಳವರೆಗೆ ವಿವಾಹ ಮಾಡಿಕೊಳ್ಳದೇ ಒಂಟಿ ಜೀವನ ಸಾಗಿಸಿದ್ದಾರೆ. ಇವರೊಂದಿಗೆ ಇದ್ದು ಕೊನೆಯುಸಿರು ಎಳೆದ ತಾಯಿಯ ಬಗ್ಗೆ ಸೋದರನಿಗೆ ವಿವರಿಸಿ ಕಣ್ಣೀರಿಟ್ಟಿದ್ದಾರೆ.
ಶಾಲಾ – ಕಾಲೇಜುಗಳಲ್ಲಿಯೇ ಹೆಚ್ಚುತ್ತಿದೆ ಕೊರೊನಾ; ಕಲಬುರಗಿ ಕೇಂದ್ರೀಯ ಶಾಲೆಯಲ್ಲಿ ಮತ್ತೆ 16 ಜನರಿಗೆ ಸೋಂಕು
ಸೋದರರ ಅಪೂರ್ವ ಭೇಟಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ಷಾಂತರ ಮಂದಿ ಈ ಭೇಟಿಯ ಕಂಡು ಖುಷಿಯಿಂದ ಮನೆಯಲ್ಲೇ ಆನಂದಭಾಷ್ಪ ಸುರಿಸಿದ್ದಾರೆ.
https://twitter.com/mjassal/status/1481084354780614656?ref_src=twsrc%5Etfw%7Ctwcamp%5Etweetembed%7Ctwterm%5E1481084354780614656%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fseparated-during-partition-brothers-meet-kartarpur-corridor-74-years-1899214-2022-01-12