alex Certify ಶಾಲಾ – ಕಾಲೇಜುಗಳಲ್ಲಿಯೇ ಹೆಚ್ಚುತ್ತಿದೆ ಕೊರೊನಾ; ಕಲಬುರಗಿ ಕೇಂದ್ರೀಯ ಶಾಲೆಯಲ್ಲಿ ಮತ್ತೆ 16 ಜನರಿಗೆ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ – ಕಾಲೇಜುಗಳಲ್ಲಿಯೇ ಹೆಚ್ಚುತ್ತಿದೆ ಕೊರೊನಾ; ಕಲಬುರಗಿ ಕೇಂದ್ರೀಯ ಶಾಲೆಯಲ್ಲಿ ಮತ್ತೆ 16 ಜನರಿಗೆ ಸೋಂಕು

ಕಲಬುರಗಿ : ಶಾಲಾ – ಕಾಲೇಜುಗಳಲ್ಲಿ ಮತ್ತೆ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದ್ದು, ಆತಂಕ ಮನೆ ಮಾಡುತ್ತಿದೆ. ನಗರದಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂದು ಕೂಡ 16 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದರೊಂದಿಗೆ ಜಿಲ್ಲೆಯ ಇನ್ನಿತರ ಶಾಲೆಗಳಲ್ಲಿನ 11 ವಿದ್ಯಾರ್ಥಿಗಳಲ್ಲಿ ಕೂಡ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಾಗುತ್ತಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ವಿದ್ಯಾರ್ಥಿ ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಎರಡು ಹಾಸ್ಟೆಲ್ ಗಳಿದ್ದು, ಎರಡನ್ನೂ ಸದ್ಯ ಕಂಟೈನ್ಮೆಂಟ್ ಝೋನ್ ಗಳನ್ನಾಗಿ ಮಾಡಲಾಗಿದೆ. ಈ ವಿಶ್ವ ವಿದ್ಯಾಲಯದಲ್ಲಿನ ಇನ್ನುಳಿದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಟೆಸ್ಟ್ ಗೆ ಒಳಪಡಿಸಲಾಗಿದೆ. ಇತ್ತೀಚೆಗಷ್ಟೇ 18 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಂದು ಕೂಡ 16 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...