ಐಆರ್ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುತ್ತಿದ್ದ ಹಿರಿಯ ನಾಗರಿಕರಿಗೆ ವಿನಾಯಿತಿ ಸಿಗುತ್ತಿತ್ತು., ಇದೀಗ ಈ ವಿನಾಯಿತಿಯನ್ನು ಕೋವಿಡ್ ಬಳಿಕ ರೈಲ್ವೇ ಇಲಾಖೆ ಹಿಂದಕ್ಕೆ ಪಡೆದಿದೆ.
ಹಿರಿಯ ನಾಗರಿಕರಿಗೆ ಈ ಅನುಕೂಲ ಶೀಘ್ರವೇ ಮರಳಿ ಬರಲಿದೆ ಎಂದು ಅನೇಕರು ನಿರೀಕ್ಷೆಯಲ್ಲಿದ್ದಾರೆ. ಆದರೆ ವಿನಾಯಿತಿಗಳಿಗೆ ಮರುಚಾಲನೆ ನೀಡುವುದು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಹೀಗೆ ಮಾಡೊದ್ರಿಂದ ಹೆಚ್ಚಾಗುತ್ತೆ ʼಉತ್ಸಾಹʼ
ಈ ಕುರಿತು ರೈಲ್ವೇ ಖಾತೆ ರಾಜ್ಯ ಸಚಿವ ಅಶ್ವಿನಿ ವೈಷ್ಣವ್, “ಈ ಸವಲತ್ತನ್ನು ಮರುಆರಂಭ ಮಾಡಲು ಅನೇಕ ವಲಯಗಳಿಂದ ಬೇಡಿಕೆಗಳು ಕೇಳಿ ಬಂದಿದ್ದವು. ಈ ಹಿಂದೆ ಭಾರತೀಯ ರೈಲ್ವೇ 54 ಕೆಟಗರಿಗಳಲ್ಲಿ ವಿನಾಯಿತಿಗಳನ್ನು ನೀಡುತ್ತಾ ಬಂದಿತ್ತು.
ಆದರೆ ಕೋವಿಡ್-19 ಸಾಂಕ್ರಮಿಕದ ಬಳಿಕ ಅನೇಕ ಕೆಟಗರಿಗಳನ್ನು ಕಡಿಮೆ ಮಾಡಲಾಗಿದೆ. ಸಾಂಕ್ರಮಿಕ ಹಾಗೂ ಕೋವಿಡ್ ಸೂಚನೆಗಳ ಅನ್ವಯ, ದಿವ್ಯಾಂಗಜನದ ನಾಲ್ಕು ಕೆಟಗರಿ, ರೋಗಿಗಳು ಹಾಗೂ ವಿದ್ಯಾರ್ಥಿಗಳ 11 ಕೆಟಗರಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕೆಟಗರಿಗಳ ವಿನಾಯಿತಿಗಳನ್ನು ಹಿಂಪಡೆಯಲಾಗಿದೆ,” ಎಂದು ರಾಜ್ಯಸಭೆಗೆ ಕೊಟ್ಟ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.