alex Certify ವಾಟ್ಸಾಪ್ ಬ್ರಾಡ್‌ ಕಾಸ್ಟ್ ಫೀಚರ್‌ ಬಳಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬ್ರಾಡ್‌ ಕಾಸ್ಟ್ ಫೀಚರ್‌ ಬಳಸಲು ಇಲ್ಲಿದೆ ಟಿಪ್ಸ್

ಜಗತ್ತಿನ ಅತ್ಯಂತ ಜನಪ್ರಿಯ ಸಂದೇಶ ಸೇವಾದಾರನಾಗಿರುವ ವಾಟ್ಸಾಪ್‌‌ ವೈಯಕ್ತಿಕ ಹಾಗೂ ವೃತ್ತಿ ಸಂಬಂಧಿ ಸಂಪರ್ಕಕ್ಕಾಗಿ ಬಹುತೇಕ ಮಂದಿಗೆ ಮೊದಲ ಆಯ್ಕೆಯಾಗಿದೆ.

ವಾಟ್ಸಾಪ್ ತಂತ್ರಾಂಶವು ತನ್ನಿಂತಾನೇ ಆಗಾಗ ಅಪ್ಡೇಟ್ ಆಗುತ್ತಲೇ ಇರುತ್ತದೆ. ಈ ಮೂಲಕ ತನ್ನ ಬಳಕೆದಾರರಿಗೆ ಮತ್ತಷ್ಟು ಸುಧಾರಿತ ಅನುಭವ ನೀಡಲು ವಾಟ್ಸಾಪ್ ಬಯಸುತ್ತದೆ.

ಕೆಲವೊಮ್ಮೆ ಬಳಕೆದಾರರು ಅದೆಷ್ಟೇ ಶಿಕ್ಷಿತರಾಗಿದ್ದರೂ ಸಹ ವಾಟ್ಸಾಪ್‌ನಲ್ಲಿರುವ ಕೆಲವೊಂದು ಸರಳ ಫೀಚರ್‌ಗಳ ಬಗ್ಗೆ ಗೊತ್ತಾಗಿರುವುದಿಲ್ಲ.

ಒಮ್ಮೆಲೇ ತಮ್ಮ ಎಲ್ಲಾ ಸಂಪರ್ಕಗಳಿಗೆ ಕಳುಹಿಸಬಹುದಾದ ಚಿತ್ರಗಳು/ವಿಡಿಯೋಗಳು/ಸಂದೇಶಗಳನ್ನು ಕಳುಹಿಸಲು ವಾಟ್ಸಾಪ್‌ನಲ್ಲಿ ಸಾಧ್ಯವಿಲ್ಲ. ಒಂದು ಬಾರಿಗೆ ಗರಿಷ್ಠ ಐದು ಮಂದಿಗೆ ಹೀಗೆ ಸಂದೇಶ ಕಳುಹಿಸಬಹುದು. ಇಲ್ಲವಾದಲ್ಲಿ, ಗ್ರೂಪ್ ಮಾಡಿಕೊಳ್ಳುವ ಮೂಲಕ ನೂರಾರು ಮಂದಿಗೆ ಒಂದೇ ಬಾರಿಗೆ ಸಂದೇಶವೊಂದನ್ನು ಕಳುಹಿಸಬಹುದು.

ಗ್ರೂಪ್ ಮಾಡಿಕೊಳ್ಳುವ ಗೋಜೇ ಇಲ್ಲದೇ, ಒಂದೇ ಬಾರಿಗೆ ಒಂದೇ ಸಂದೇಶವನ್ನು 256ರಷ್ಟು ಮಂದಿಗೆ ಕಳುಹಿಸಬಹುದಾದ ಆಯ್ಕೆಯೆಂದರೆ ಅದು”ಬ್ರಾಡ್‌ಕಾಸ್ಟ್‌ ಲಿಸ್ಟ್ಸ್‌’. ನಿಮ್ಮ ಫೋನ್‌ನ ಕಾಂಟಾಕ್ಟ್‌ ಪಟ್ಟಿಯಲ್ಲಿರುವ ಮಂದಿಗೆ ನೀವು ಈ ಬ್ರಾಡ್‌ಕಾಸ್ಟ್ ಪಟ್ಟಿಯ ಮೂಲಕ ಒಟ್ಟಿಗೇ ಸಂದೇಶಗಳನ್ನು ಕಳುಹಿಸಬಹುದು.

BIG NEWS: ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ…; ಸಚಿವ ಸುಧಾಕರ್ ಸ್ಪಷ್ಟನೆ

ವಾಟ್ಸಾಪ್ ಬ್ರಾಡ್‌ಕಾಸ್ಟ್ ಫೀಚರ್‌ ಬಳಸುವುದು ಹೀಗೆ:

* ವಾಟ್ಸಾಪ್ ಅಪ್ಲಿಕೇಶನ್‌ ತೆರೆದು, ಬಲಬದಿಯ ಮೇಲ್ಮೂಲೆಯಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಟ್ಯಾಪ್ ಮಾಡಿ.

* ತೆರೆದುಕೊಂಡ ಆಯ್ಕೆಗಳ ಪಟ್ಟಿಯಲ್ಲಿ, ಎರಡನೆಯದಾದ ’New Broadcast’ ಆಯ್ಕೆ ತೆರೆಯಿರಿ.

* ಬ್ರಾಡ್‌ಕಾಸ್ಟ್ ಪಟ್ಟಿಯಿಂದ ಸಂಪರ್ಕಗಳನ್ನು ಆಯ್ದುಕೊಳ್ಳಲು ನಿಮಗೆ ಕೇಳಲಾಗುತ್ತದೆ.

* 256ರ ಮಿತಿಯವರೆಗೂ ನಿಮಗೆ ಬೇಕಾದಷ್ಟು ಸಂಪರ್ಕಗಳನ್ನು ಪಟ್ಟಿಗೆ ಸೇರಿಸಿ.

* ಬೇಕಾದ ಎಲ್ಲ ಸಂಪರ್ಕಗಳನ್ನು ಆಯ್ದುಕೊಂಡ ಬಳಿಕ ಟಿಕ್ ಮಾರ್ಕ್ ಮೇಲೆ ಟ್ಯಾಪ್ ಮಾಡಿ, ಬ್ರಾಡ್‌ಕಾಸ್ಟ್ ಗವಾಕ್ಷಿ ಸೃಷ್ಟಿಸಿಕೊಳ್ಳಿ.

* ನೀವು ಈ ಗವಾಕ್ಷಿಯ ಮೂಲಕ ಯಾವುದೇ ಸಂದೇಶವನ್ನು ಅಲ್ಲಿರುವ ಎಲ್ಲ ಸಂಪರ್ಕಗಳಿಗೂ ಒಂದೇ ಬಾರಿಗೆ ಕಳುಹಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...