ಎಚ್ಬಿಓ ಮ್ಯಾಕ್ಸ್ನ ’ಸೆಲೆನಾ + ಶೆಫ್’ ಶೋ ಮೂಲಕ ಸೆಲೆಬ್ರಿಟಿ ಸೆಲೆನಾ ಗೊಮೆಜ಼್ ಮಾಸ್ಟರ್ ಶೆಫ್ಗಳೊಂದಿಗೆ ತಮ್ಮ ಅಡುಗೆ ಕೌಶಲ್ಯಗಳನ್ನು ತೋರುತ್ತಾರೆ. ಇಂತಿಪ್ಪ ಸೆಲೆನಾ ಸೆಲೆಬ್ರಿಟಿ ಪದ್ಮ ಲಕ್ಷ್ಮಿ ಜೊತೆಗೆ ಭಾರತೀಯ ಖಾದ್ಯಗಳನ್ನು ತಯಾರಿಸುತ್ತಿರುವ ಶೋ ಒಂದು ದೇಸೀ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.
ಒಂದೇ ವಾರದಲ್ಲಿ ಮೂರನೇ ಅಗ್ನಿ ಅವಘಡಕ್ಕೆ ಸಾಕ್ಷಿಯಾದ ವಾಣಿಜ್ಯ ನಗರಿ ಮುಂಬೈ…..!
ಹೊಸ ಖಾದ್ಯಗಳ ಅನ್ವೇಷಣೆಯಲ್ಲಿ ನಿರತರಾದ ಸೆಲೆನಾ ಈ ಬಾರಿ ಮಸಾಲಾ ಚಹಾ ಹಾಗೂ ಇನ್ನಷ್ಟು ದೇಸೀ ತಿನಿಸುಗಳನ್ನು ತಯಾರಿಸಿದ್ದಾರೆ.
ಇದೇ ವೇಳೆ ಜೀವನದಲ್ಲಿ ಮೊದಲ ಬಾರಿಗೆ ಚಹಾ ಸೇವಿಸಿದ ಸೆಲೆನಾ, ಚಹಾ ಹೀರುತ್ತಲೇ ಕೆಲ ಕ್ಷಣಗಳ ಕಾಲ ಮಾತು ಬಾರದವರಾಗಿಬಟ್ಟಿದ್ದಾರೆ. ಈ ದೃಶ್ಯದ ವಿಡಿಯೋವನ್ನು ಸೆಲೆನಾ ಅಭಿಮಾನಿಯೊಬ್ಬರು ಅಪ್ಲೋಡ್ ಮಾಡಿದ್ದು, ಅದಕ್ಕೆ ಮೂವತ್ತು ಲಕ್ಷ ಲೈಕ್ಸ್ ಸಿಕ್ಕಿವೆ.
ಸೆಲೆನಾ + ಶೆಫ್ ಸೀಸನ್ 3ರ 3ನೇ ಕಂತಿನಲ್ಲಿ ಸೆಲೆಬ್ರಿಟಿ ಶೆಫ್ ಪದ್ಮ ಲಕ್ಷ್ಮಿ ಅವರು ಸೆಲೆನಾಗೆ ಪ್ರಾನ್ ಕರ್ರಿ ಹಾಗೂ ಅನ್ನ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಈ ಖಾದ್ಯಗಳನ್ನು ಮೊದಲ ಬಾರಿಗೆ ಸವಿದಾಗ ಆಕೆಯ ಮೊಗದಲ್ಲಿ ಬಂದ ಭಾವವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.