alex Certify ಭ್ರಷ್ಟಾಚಾರ ಆರೋಪದ ಬೆನ್ನಲ್ಲೇ ರಾಮ ಮಂದಿರ ಟ್ರಸ್ಟ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭ್ರಷ್ಟಾಚಾರ ಆರೋಪದ ಬೆನ್ನಲ್ಲೇ ರಾಮ ಮಂದಿರ ಟ್ರಸ್ಟ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ..!

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ನೇತೃತ್ವದ ಗುಂಪೊಂದು ರಾಮಮಂದಿರ ದೇವಾಲಯ ನಿರ್ಮಾಣ ಹಾಗೂ ವಿಗ್ರಹಗಳ ರಕ್ಷಣೆಗೆ ಮಾಡಲಾದ ಖರ್ಚಿನ ಬಗ್ಗೆ ವಿವರಣೆ ಬೇಕೆಂದು ಕೋರಿ ಅಲಹಾಬಾದ್​ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ರಾಮಜನ್ಮ ಭೂಮಿ ಪ್ರದೇಶದ ಒಳಗಿರುವ ಐತಿಹಾಸಿಕ ದೇವಾಲಯವನ್ನ ನೆಲಸಮ ಮಾಡಲಾಗುತ್ತಿದೆ. ಅವುಗಳನ್ನ ಪುನರ್ ​ಸ್ಥಾಪಿಸಿ ನವೀಕರಣ ಮಾಡಬೇಕಿತ್ತು. ಈ ದೇವಾಲಯಕ್ಕೆ ಸೇರಿದ ವಿಗ್ರಹಗಳು ನಾಪತ್ತೆಯಾಗಿವೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

ರಾಮ ಮಂದಿರ ಜನ್ಮಭೂಮಿ ಪ್ರದೇಶ ಖರೀದಿ ವೇಳೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಮ ಮಂದಿರ ಟ್ರಸ್ಟ್​ ವಿರುದ್ಧ ಸಮಾಜವಾದಿ ಪಕ್ಷ ಹಾಗೂ ಆಮ್​ ಆದ್ಮಿ ಪಕ್ಷಗಳು ಆರೋಪ ಮಾಡಿದ ಬೆನ್ನಲ್ಲೇ ಇದೀಗ ಈ ಆರೋಪವೊಂದು ಬೆಳಕಿಗೆ ಬಂದಿದೆ. ಆದರೆ ರಾಮ ಮಂದಿರ ಟ್ರಸ್ಟ್​ನ ಸದಸ್ಯರು ಈ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

ಇನ್ನು ಈ ಸಂಬಂಧ ಮಾತನಾಡಿದ ರಾಮ ಮಂದಿರ ಟ್ರಸ್ಟ್​ ಅಧ್ಯಕ್ಷರ ಪರ ವಕ್ತಾರ ಮಹಂತ್​ ಕಮಲ್​ ನಯನ್​ ದಾಸ್​, ಈಗ ನಮ್ಮ ಮೇಲೆ ಬೆದರಿಕೆ ಒಡ್ಡುತ್ತಿರುವವರ್ಯಾರೂ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಕೊಡುಗೆಯನ್ನ ನೀಡಿದವರಲ್ಲ. ನಾವು ದಶಕಗಳಿಂದ ಕಾನೂನಾತ್ಮಕ ಹೋರಾಟವನ್ನ ನಡೆಸಿಕೊಂಡು ಬರ್ತಿದ್ದೇವೆ. ಆದರೆ ಕೋರ್ಟ್ ಕೇಸ್​ ಹಾಕಿದ ಮಾತ್ರಕ್ಕೆ ನಾವು ಹೆದರೋದಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...